ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಗಾನಂದಗೆ ‘ಮಿಸ್ಟರ್‌ ಲಿಂಗರಾಜ’ ಪಟ್ಟ

Last Updated 1 ಅಕ್ಟೋಬರ್ 2022, 16:01 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಕ್ರೀಡಾ ವಿಭಾಗ ಹಾಗೂ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 36ನೇ ‘ಮಿಸ್ಟರ್ ಲಿಂಗರಾಜ’ ಸ್ಪರ್ಧೆ ಗಮನ ಸೆಳೆಯಿತು.

ಸ್ಪರ್ಧೆಯಲ್ಲಿ ಬಿ.ಎ ಪ್ರಥಮ ವರ್ಷದ ನಿಂಗಾನಂದ ಹಿರೇಮಠ ‘ಮಿಸ್ಟರ್ ಲಿಂಗರಾಜ’ ಪ್ರಶಸ್ತಿ ಪಡೆದುಕೊಂಡರು. ಪ್ರವೀಣ ಕುದರಿಮುತಿ ದ್ವಿತೀಯ, ಅರ್ಪಿತ್‌ ತೋರಗಲ್ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯ ನಿರ್ಣಾಯಕರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಅಜಿತ್ ಸಿದ್ದಣ್ಣವರ, ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್‍ ಅಧ್ಯಕ್ಷ ಎಂ.ಕೆ.ಗುರವ್, ಕಾರ್ಯದರ್ಶಿ ಗಂಗಾಧರ ಎಂ., ತರಬೇತುದಾರ ಹೇಮಂತ್ ಹವಲ್ ಹಾಗೂ ಸುನಿಲ್ ರಾವುತ್ ಕಾರ್ಯನಿರ್ವಹಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT