ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭವಿಷ್ಯ ನಿರ್ಧರಿಸುವ ಅವಕಾಶ: ಅನಸೂಯಾ ಹಿರೇಮಠ

Published 25 ಏಪ್ರಿಲ್ 2024, 4:25 IST
Last Updated 25 ಏಪ್ರಿಲ್ 2024, 4:25 IST
ಅಕ್ಷರ ಗಾತ್ರ

ಭಾರತ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ನಾಯಕರೇ. ದೇಶದ ನಾಯಕನನ್ನು ಆಯ್ಕೆ ಮಾಡುವ ಉತ್ಕೃಷ್ಟ ಜವಾಬ್ದಾರಿ ಪ್ರತಿಯೊಬ್ಬ ಮತದಾರನಿಗಿದೆ. ಮುಂದಿನ ಐದು ವರ್ಷ ದೇಶದ ಭವಿಷ್ಯವನ್ನು ನಿರ್ಧರಿಸುವ ಒಂದು ಕ್ಷಣ ಈ ಮತದಾನ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭವೇ ಈ ಮತದಾನ. ಮತದಾನ ನಮ್ಮ ಹಕ್ಕು ಮಾತ್ರವಲ್ಲ; ಅದು ಶಕ್ತಿ ಕೂಡ. ದೇಶದ ಭವಿಷ್ಯ, ರಕ್ಷಣೆ, ಅಭಿವೃದ್ಧಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಹೋಗಬಲ್ಲ ನಾಯಕನ ಆಯ್ಕೆಗೆ ಇದುವೇ ಕಾಲ. ಒಂದೊಂದು ಮತವು ಅಮೂಲ್ಯ. ನನ್ನ ಅಮೂಲ್ಯ ಮತ ನಾನು ಚಲಾಯಿಸುತ್ತೇನೆ. ಯಾರೂ ಮತದಾನದಿಂದ ತಪ್ಪಿಸಿಕೊಳ್ಳಬೇಡಿ. ಅದು ನಿಮಗೆ ನೀವೇ ಮೋಸ ಮಾಡಿಕೊಂಡಂತೆ.

–ಅನಸೂಯಾ ಹಿರೇಮಠ, ಉಪನ್ಯಾಸಕಿ, ಸರ್ಕಾರಿ ಸರಸ್ವತಿ ಬಾಲಿಕಿಯರ ಪದವಿಪೂರ್ವ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT