ಬೆಳಗಾವಿ: ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಪ್ರೇಮಿಗಳು ಆಟೊರಿಕ್ಷಾದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.

‘ಸವದತ್ತಿ ತಾಲ್ಲೂಕು ಮುನವಳ್ಳಿ ಗ್ರಾಮದ ರಾಘವೇಂದ್ರ ನಾರಾಯಣ ಜಾಧವ (28) ಮತ್ತು ರಂಜಿತಾ ಅಡಿವೆಪ್ಪ ಚೌಬಾರಿ (25) ಮೃತರು. ಇಬ್ಬರೂ ಪ್ರೀತಿಸುತ್ತಿದ್ದರು. ಈಚೆಗೆ ರಂಜಿತಾ ಅವರಿಗೆ ಬೇರೊಬ್ಬ ಹುಡುಗನ ಜೊತೆಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಹಿರೇನಂದಿ ಗ್ರಾಮವು ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮಕ್ಕೆ ಹೊಂದಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ವಿಷಯ ಗೊತ್ತಾಗಿದೆ’ ಎಂದು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಆಟೊ ಚಾಲಕನಾಗಿದ್ದ ರಾಘವೇಂದ್ರ, ಮನೆಯಲ್ಲಿ ಪ್ರೀತಿಯ ವಿಷಯ ತಿಳಿಸಿರಲಿಲ್ಲ. ಸೋಮವಾರ ಕೆಲಸಕ್ಕೆ ಹೋಗಿದ್ದು ಮನೆಗೆ ಮರಳಿರಲಿಲ್ಲ. ಪೊಲೀಸರಿಂದಲೇ ವಿಷಯ ಗೊತ್ತಾಗಿದೆ. ಆಟೊದಲ್ಲಿ ಇಬ್ಬರೂ ಹಗ್ಗದಿಂದ ನೇಣು ಹಾಕಿಕೊಂಡ ರೀತಿ ಪತ್ತೆಯಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ. ಪೊಲೀಸರು ತನಿಖೆ ಮಾಡಬೇಕು’ ಎಂದು ರಾಘವೇಂದ್ರ ಅವರ ಸಹೋದರ ಸೋಮನಾಥ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.