ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಬನೂರ: ಮಾಧವಾನಂದ ಪ್ರಭೂಜಿ ಆಶ್ರಮ ಉದ್ಘಾಟನೆ

Last Updated 23 ಸೆಪ್ಟೆಂಬರ್ 2021, 14:01 IST
ಅಕ್ಷರ ಗಾತ್ರ

ಬೆನಕಟ್ಟಿ: ‘ಮಾಧವಾನಂದ ಪ್ರಭೂಜಿ ಅವರು ವಿಶ್ವ ಶಾಂತಿಗಾಗಿ ಶ್ರಮಿಸಿದ ಮಹಾತ್ಮರು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಸಮೀಪದ ಮಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾಧವಾನಂದ ಪ್ರಭೂಜಿ ಆಶ್ರಮ, ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮನಕುಲದ ಉದ್ಧಾರಕ್ಕೆ ತನ್ನ ಜೀವನವನ್ನೆ ತ್ಯಾಗ ಮಾಡಿದವರು ಇಂಚಗೇರಿ ಮಹಾರಾಜರು. ಅವರ ತತ್ವ–ಸಿದ್ಧಾಂತವನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿದರು. ಪ್ರಭೂಜಿ ಮೂರ್ತಿಯನ್ನು ಕುಂಭಮೇಳ ಹಾಗೂ ಆರತಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಸಂಗಪ್ಪ ಸಾಲಿ ಮಹಾರಾಜ, ಶಂಕ್ರೆಪ್ಪ ಕೌಜಲಗಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಮುಖಂಡರಾದ ಫಕೀರಪ್ಪ ಹದ್ದನ್ನವರ, ವೈ.ಬಿ. ನರಿ, ಮುತ್ತೆಪ್ಪ ಮೇಟಿ, ಕರೆಪ್ಪ ಮೇಟಿ, ಯಲ್ಲಪ್ಪ ಮುರಗೋಡ, ಪಡೆಪ್ಪ ನರಿ, ಯಲ್ಲಪ್ಪ ನರಿ, ವಿಠ್ಠಲ ಅಗಸಿಮನಿ, ನಾಗಪ್ಪ ಬೆಳ್ಳಿವರಿ, ಮಹಾದೇವ ಪಟಾತ, ಪುಂಡಲೀಕ ಪಟಾತ, ಬಸಪ್ಪ ಪಟಾತ, ರಾಮಕೃಷ್ಣ ಅಗಸಿಮನಿ ಉಪಸ್ಥಿತರಿದ್ದರು.

ಮಹಾದೇವ ಮುರಗೋಡ ನಿರೂಪಿಸಿದರು. ಭರಮಪ್ಪ ಪಟಾತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT