ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ: ಸಂಭ್ರಮದಿಂದ ನೆರವೇರಿದ ಮಲ್ಲಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ

Published 2 ಜೂನ್ 2024, 13:35 IST
Last Updated 2 ಜೂನ್ 2024, 13:35 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಮರಡಿ ಗಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ನೆರವೇರಿತು.

ಪಟ್ಟಣದ ಎತ್ತರ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪದ್ಧತಿಯಂತೆ ಈ ವರ್ಷವೂ ಮರಡಿ ಗಲ್ಲಿ ಹಿರಿಯರು, ರೈತ ಕುಟುಂಬಸ್ಥರು ಮಲ್ಲಯ್ಯಸ್ವಾಮಿ ಪ್ರತಿಮೆಗೆ ಅಲಂಕಾರ, ಅಭಿಷೇಕ ಮಾಡಿ ಭಕ್ತಿಯಿಂದ ಪ್ರಾರ್ಥಿಸಿದರು.‌ ಮಲ್ಲಯ್ಯನ ಪ್ರತಿಮೆ ಎದುರು‌ ಕವಲ ಕಟ್ಟಿ ವರ ಕೇಳಿದರು.

ಮಳೆ, ಬೆಳೆ ಸಂಪನ್ನವಾಗಲಿ, ರೈತಾಪಿ ಕುಟುಂಬ, ನಾಡು ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿದರು.

ಬೆಟ್ಟದಲ್ಲಿರುವ ಮಲ್ಲಯ್ಯನ‌ ದೇವಸ್ಥಾನಕ್ಕೆ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಹೂವು, ಹಣ್ಣು, ಕಾಯಿ, ಕರ್ಪೂರ, ನೈವೇದ್ಯ  ಅರ್ಪಿಸಿದರು.

ದೇವಸ್ಥಾನ ಅರ್ಚಕ ನಾಗಪ್ಪ ಪೂಜೇರಿ ಮಲ್ಲಯ್ಯ ಸ್ವಾಮಿ ಪ್ರತಿಮೆಗೆ ಸಿಂಗರಿಸಿ, ಪೂಜೆ ನೆರವೇರಿಸಿದರು.

ಹಿರಿಯರಾದ ಗಂಗಪ್ಪ ತುರಮರಿ, ಬಸಪ್ಪ ಶಿರವಂತಿ, ಗದಿಗೆಪ್ಪ ತೋಟಗಿ, ಶಿವಬಸಪ್ಪ ತೋಟಗಿ, ನಾಗರಾಜ ಹುಲಕುಂದ, ಉಳವಪ್ಪ ತೋಟಗಿ, ಬಸವರಾಜ ಹುಲಕುಂದ, ಇತರರು ಜಾತ್ರೆ ಯಶಸ್ವಿಗೆ ಶ್ರಮಿಸಿದರು. ಭಕ್ತರಿಗೆ ಮಹಾಪ್ರಸಾದ ಉಣಬಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT