ಸಾರಾಯಿಗೆ ಹಣ ನೀಡದ ಪತ್ನಿಯ ಹತ್ಯೆಗೈದವನಿಗೆ ಮರಣದಂಡನೆ ಶಿಕ್ಷೆ

ಶನಿವಾರ, ಮೇ 25, 2019
28 °C

ಸಾರಾಯಿಗೆ ಹಣ ನೀಡದ ಪತ್ನಿಯ ಹತ್ಯೆಗೈದವನಿಗೆ ಮರಣದಂಡನೆ ಶಿಕ್ಷೆ

Published:
Updated:

ಬೆಳಗಾವಿ: ಸಾರಾಯಿ ಕುಡಿಯಲು ಹಣ ನೀಡಲಿಲ್ಲ ಹಾಗೂ ತನ್ನೊಂದಿಗೆ ಇರಲು ಒಲ್ಲೆ ಎಂದ ಪತ್ನಿಯನ್ನು ನಡುಬೀದಿಯಲ್ಲಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದ ನಾಗರಾಜ ಯಲ್ಲಪ್ಪ ನಾಯಿಕ ಅವರಿಗೆ ಇಲ್ಲಿನ 5ನೇ ಅಪರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಹುಕ್ಕೇರಿ ತಾಲ್ಲೂಕಿನ ಅಲದಾಳ ನಿವಾಸಿ ನಾಗರಾಜ (36) ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಪ್ರತಿನಿತ್ಯ ಪತ್ನಿ ಗೀತಾ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗೀತಾ, ಬೆಳಗಾವಿಯ ಹಿಂಡಾಲ್ಕೊ ಕ್ವಾಟರ್ಸ್‌ನಲ್ಲಿರುವ ತನ್ನ ತವರು ಮನೆಗೆ ಬಂದು ವಾಸಿಸುತ್ತಿದ್ದರು. ಜೀವನೋಪಾಯಕ್ಕಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು.

ನಾಗರಾಜ ತವರು ಮನೆಗೆ ಬಂದು ಜಗಳವಾಡುತ್ತಿದ್ದ. ಗೀತಾ ಅವರನ್ನು ತನ್ನ ಜೊತೆ ಕಳುಹಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದ. ಗೀತಾ ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರ್‌ಗೆ ಹೋಗಿ, ಸಾರಾಯಿ ಕುಡಿಯಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದ. 2016ರ ಮಾರ್ಚ್‌ 28ರಂದು ಹಣ ನೀಡದೇ ಇದ್ದಾಗ ಆಕ್ರೋಶಗೊಂಡ ನಾಗರಾಜ, ಹಿಂಡಾಲ್ಕೊ ಫ್ಯಾಕ್ಟರಿ ಬಳಿ ಎನ್‌.ಎಚ್‌ 4 ಸೇತುವೆ ಕೆಳಗಿನಿಂದ ಹಾದು ತನ್ನ ಬ್ಯೂಟಿ ಪಾರ್ಲರ್‌ ಕೆಲಸಕ್ಕೆ ಹೊರಟಿದ್ದ ಗೀತಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದರು. ತಲೆ, ಮುಖ ಹಾಗೂ ಕೈ ಮೇಲೆ ಹೊಡೆದು, ಹತ್ಯೆ ಮಾಡಿದ್ದರು.

ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಪ್ರಭಾವತಿ ಜಿ. ಅವರು ಮರಣದಂಡನೆ ವಿಧಿಸಿ ಆದೇಶ ನೀಡಿದರು. ಸರ್ಕಾರದ ಪರವಾಗಿ ಮುರಳೀಧರ ಕುಲಕರ್ಣಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !