ಗೋಕಾಕ: 12ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಢ್ಯ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಸ್ವರ್ಧೆಗಳು ಸೋಮವಾರ ಇಲ್ಲಿನ ಮಹರ್ಷಿ ಶ್ರೀವಾಲ್ಮೀಕಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿದ ಭವ್ಯ ವರ್ಣರಂಜಿತ ವೇದಿಕೆಯಲ್ಲಿ ಜರುಗಿದವು.

ರಾಜ್ಯಮಟ್ಟದ ದೇಹಧಾರ್ಡ್ಯ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆಯಾಗಿ ನಗದು ₹2 ಲಕ್ಷ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಮೊದಲನೇ ರನ್ನರಪ್ ಆಗಿ ಬೆಂಗಳೂರಿನ ಕುಮಾರ ಕೆ. ನಗದು ₹1 ಲಕ್ಷ ಮತ್ತು ಟ್ರೋಫಿ, ಎರಡನೇ ರನ್ನರಪ್ ಆಗಿ ಉಡುಪಿಯ ಸ್ವರೂಪ ಬಂಗೇರಾ ನಗದು ₹50 ಸಾವಿರ ಮತ್ತು ಟ್ರೋಫಿ ಹಾಗೂ ಬೆಸ್ಟ್ ಫೋಸರ್ ಆಗಿ ದಾವಣಗೆರೆಯ ವರೂಣ ಕುಮಾರ್ ಆಯ್ಕೆಯಾಗಿ ₹10 ಸಾವಿರ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಬೆಳಗಾವಿಯ ಪ್ರಶಾಂತ್ ಕನ್ನೂಕರ ಆಯ್ಕೆಯಾಗಿ ನಗದು ₹1.50 ಲಕ್ಷ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಮೊದಲನೇ ರನ್ನರಪ್ ಆಗಿ ಬೆಳಗಾವಿಯ ವೆಂಕಟೇಶ್ ತಹಶೀಲ್ದಾರ್ ನಗದು ₹1 ಲಕ್ಷ ಮತ್ತು ಟ್ರೋಫಿ, ಎರಡನೇ ರನ್ನರಪ್ ಆಗಿ ಬೆಳಗಾವಿಯ ವಿಶಾಲ ಚವ್ಹಾಣ ನಗದು ₹50 ಸಾವಿರ ಮತ್ತು ಟ್ರೋಫಿ ಪಡೆದರೆ ಬೆಸ್ಟ್ ಪೋಸರ್ ಆಗಿ ಬೆಳಗಾವಿಯ ಉಮೇಶ್ ಗಣ್ಣಗನೆ ಆಯ್ಕೆಯಾಗಿ ನಗದು ₹10 ಸಾವಿರ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ತಾಲ್ಲೂಕು ಮಟ್ಟದ ದೇಹದಾರ್ಢ್ಯ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಆಕಾಶ ಹಂಜಿ ಆಯ್ಕೆಯಾಗಿ ನಗದು ₹50 ಸಾವಿರ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಮೊದಲನೇ ರನ್ನರಪ್ ಆಗಿ ಸಾಗರ ಹಾದಿಮನಿ ನಗದು ₹25 ಸಾವಿರ ಮತ್ತು ಟ್ರೋಫಿ, ಎರಡನೇ ರನ್ನರಪ್ ಆಗಿ ಸಾಗರ ಕಳ್ಳಿಮನಿ ನಗದು ₹15 ಸಾವಿರ ಮತ್ತು ಟ್ರೋಫಿ ಹಾಗೂ ಬೆಸ್ಟ್ ಪೋಸರ್ ಆಗಿ ಇರ್ಫಾನ್ ಇರಾನಿ ನಗದು ₹10 ಸಾವಿರ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಕಾರ್ಯಕ್ರಮದ ರೂವಾರಿ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬಿಡಿಸಿಸಿ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಐಬಿಬಿಎಫ್ ಸದಸ್ಯ ಅಜೀತ ಸಿದ್ದನ್ನವರ, ಕೆಎಬಿಬಿ ಅಧ್ಯಕ್ಷ ಜೆ.ನಿಲಕಂಠ, ಪ್ರಧಾನ ಕಾರ್ಯದರ್ಶಿ ಜೆ.ಡಿ.ಭಟ್ಟ್, ಬೆಳಗಾವಿ ಜಿಲ್ಲಾ ದೇಹದಾರ್ಢ್ಯ ಸಂಘದ ಅಧ್ಯಕ್ಷ ಗಂಗಾಧರ ಎಂ,, ಕಾರ್ಯದರ್ಶಿ ಹೆಮಂತ್ ಹವಳ, ತಾಲೂಕು ದೇಹದಾರ್ಢ್ಯ ಸಂಘದ ಅಧ್ಯಕ್ಷ ಸಂಜಯ ದೇವರಮನಿ, ಉಪಾಧ್ಯಕ್ಷ ರಿಯಾಜ ಚೌಗಲಾ, ಕಾರ್ಯಾಧ್ಯಕ್ಷ ಕಾಟೇಶ ಗೋಕಾವಿ, ಕಾರ್ಯದರ್ಶಿ ರಮೇಶ ಕಳ್ಳಿಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.