ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇ ಸ್ತ್ರೀ ಶಕ್ತಿ ಸಂಘದಿಂದ ವೈದ್ಯಕೀಯ ಸಲಕರಣೆ ಘಟಕ

Last Updated 2 ನವೆಂಬರ್ 2020, 14:47 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಸ್ತ್ರೀಶಕ್ತಿ ಸಂಘವು ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಆವರಣದ ನರ್ಸಿಂಗ್ಕಾಲೇಜಿನಲ್ಲಿ ವೈದ್ಯಕೀಯ ಸಲಕರಣೆಗಳ ಘಟಕ ಆರಂಭಿಸಿದೆ.

ಘಟಕವನ್ನು ಸಂಘದ ಅಧ್ಯಕ್ಷೆ ಆಶಾತಾಯಿ ಕೋರೆ ಉದ್ಘಾಟಿಸಿದರು. ನಂತರ ಮಾತನಾಡಿ, ‘ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದಾಗ ಅಲ್ಲಿಯೂ ಆರೈಕೆ ಅತಿ ಮುಖ್ಯವಾಗಿರುತ್ತದೆ. ಆದರೆ, ಮನೆಗಳಲ್ಲಿ ಸಲಕರಣೆಗಳು ಲಭ್ಯ ಇರುವುದಿಲ್ಲ. ಅದರಲ್ಲೂ ವೃದ್ಧರನ್ನು ನೋಡಿಕೊಳ್ಳಲು ಹಕವು ಸಲಕರಣೆಗಳು ಬೇಕಾಗುತ್ತವೆ. ಅವು ಕೆಲವೇ ದಿನಗಳವರೆಗೆ ಅವಶ್ಯ ಇರುವುದರಿಂದ, ಖರೀದಿಸಲು ಕುಟುಂಬದವರಿಗೆ ಹೊರೆಯಾಗುವ ಸಂಭವ ಅಧಿಕವಾಗಿರುತ್ತದೆ. ಇದನ್ನು ಮನಗಂಡು ಘಟಕ ಆರಂಭಿಸಿದ್ದೇವೆ’ ಎಂದರು.

‘ವಾಕರ್‌, ಏರ್‌ಬೆಡ್, ಐವಿ ಸ್ಟ್ಯಾಂಡ್, ವ್ಹೀಲ್ ಚೇರ್, ಅಡ್ಜಸ್ಟೆಬಲ್ ಬೆಡ್ ಮೊದಲಾದವು ಇವೆ. ಮುಂಗಡ ಹಣ ಪಡೆದು ನೀಡಲಾಗುತ್ತದೆ. ಸಾಮಗ್ರಿ ಮರಳಿಸಿದ ನಂತರ ನೀಡಿದ ಹಣವನ್ನು ಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಂಘದ ಸಂಯೋಜಕರಾದ ಪ್ರೀತಿ ದೊಡವಾಡ, ಡಾ.ಅಲ್ಕಾ ಕಾಳೆ, ಸುಜಾತಾ ಜಾಲಿ, ಡಾ.ಸುಧಾ ರೆಡ್ಡಿ, ಡಾ.ನೇಹಾ ದಡೇದ, ಡಾ.ಹರಪ್ರೀತ್‌ ಕೌರ್, ಡಾ.ಸ್ನೇಹಾ ಧರ‍್ಮಾಯತ, ಡಾ.ಆರತಿ ಮಹಿಶಾಳೆ ಇದ್ದರು.

ಹೆಚ್ಚಿನ ಮಾಹಿತಿಗೆ ಮೊ: 94483 05413 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT