ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಲ್.ಸಂತೋಷ್ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕು: ಅಭಯ ಪಾಟೀಲ

Last Updated 2 ಮೇ 2022, 13:00 IST
ಅಕ್ಷರ ಗಾತ್ರ

ಬೆಳಗಾವಿ: ‘‘ಪದೇ ಪದೇ ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪಕ್ಷ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಆ ಹೇಳಿಕೆ ನೀಡಿರುತ್ತಾರೆ’’ ಎಂದು ಇಲ್ಲಿನ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿ, ‘ಅವರು ಹೇಳಿದ ರೀತಿಯಲ್ಲಿ ಪಕ್ಷ ಕೂಡ ಕೆಲಸ ಮಾಡುತ್ತಿರಬಹುದು’ ಎಂದರು.

‘ಅವರು ಪಕ್ಷ ಮತ್ತು ಸಮಾಜದ ಚಿಂತನೆ ಮಾಡಿಯೇ ಅಭಿಪ್ರಾಯ ಹೇಳಿರಬಹುದು. ಅವರ ಮಾತಿಗೆ ಅರ್ಥವಿರುತ್ತದೆ. ಆಗದಿರುವುದನ್ನು ಹೇಳುವಂತಹ ಮನುಷ್ಯ ಅವರಲ್ಲ’ ಎಂದು ಹೇಳಿದರು.

‘ಕೆಲವು ನಾಯಕರು ರಾಜಕೀಯ ಪ್ರೇರಿತ ಹೇಳಿಕೆ ನೀಡಬಹುದು. ಆದರೆ, ಸಂತೋಷ್ ಅವರು ಆ ಮಟ್ಟದಲ್ಲಿ ಇಲ್ಲ. ಅವರು ಹೇಳಿದ್ದಾರೆ ಎಂದರೆ ನಿಶ್ಚಿತವಾಗಿಯೂ ಆ ರೀತಿ ಚಿಂತನೆ ಆಗಿರಬಹುದು’ ಎಂದು ತಿಳಿಸಿದರು.

‘ಸಚಿವ ಸಂಪುಟ ವಿಸ್ತರಣೆ ಆಗುವುದಿದ್ದರೆ ಹಿಂದೆಯೇ ಆಗುತ್ತಿತ್ತು. ಈವರೆಗೂ ಆಗಿಲ್ಲವೆಂದರೆ ನೀವೇ ಅರ್ಥ ಮಾಡಿಕೊಳ್ಳಿ. ಮುಂದೇನು ಮಾಡುತ್ತಾರೆಯೋ ಮುಖ್ಯಮಂತ್ರಿಯನ್ನೇ ಕೇಳಿ. ಸಂಪುಟ ವಿಸ್ತರಣೆ ಮುನ್ಸೂಚನೆಯೂ ನನಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT