ಬೆಳಗಾವಿ: ‘ಜಮಾತ್–ಇ–ಇಸ್ಲಾಮಿ ಹಿಂದ್’ ವತಿಯಿಂದ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ಸೆ.1ರಿಂದ 30ರವರೆಗೆ ನಡೆಯಲಿದೆ’ ಎಂದು ಸಂಘಟನೆಯ ರಾಜ್ಯ ಮಹಿಳಾ ಘಟಕದ ಸಲಹಾ ಪರಿಷತ್ತಿನ ಸದಸ್ಯೆ ಸಾಜೀದುನ್ ನಿಸ್ಸಾ ಲಾಲ್ಮಿಯ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳು ದೇಶದ ಶಾಂತಿ ಮತ್ತು ಪ್ರಗತಿಗೆ ಧಕ್ಕೆ ತರುತ್ತಿವೆ. ಮಹಿಳೆಯರ ಆತ್ಮಹತ್ಯೆಗಳ ಪ್ರಮಾಣವೂ ಏರಿಕೆಯಾಗಿದೆ. ಸಮಾಜದಲ್ಲಿ ಸ್ತ್ರೀಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ನೈತಿಕ ಮೌಲ್ಯಗಳ ಕುಸಿತ, ಪೋರ್ನೋಗ್ರಫಿಯ ಅತಿಯಾದ ಬಳಕೆಯೇ ಇದಕ್ಕೆ ಕಾರಣ. ಹಾಗಾಗಿ ನಿಜವಾಗಿ ಸ್ವಾತಂತ್ರ್ಯ ಎಂದರೇನು? ಇದರಲ್ಲಿ ನೈತಿಕತೆ ಪಾತ್ರವೇನು ಎನ್ನುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಒಂದಿಡೀ ತಿಂಗಳು ಅಭಿಯಾನ ಕೈಗೊಳ್ಳುತ್ತಿದ್ದೇವೆ’ ಎಂದರು.

‘ಶಿಕ್ಷಣ ತಜ್ಞರು, ವಕೀಲರು, ಧರ್ಮಗುರುಗಳು, ಸಮುದಾಯದ ನೇತಾರರ ಸಹಕಾರದೊಂದಿಗೆ ರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಈ ಅಭಿಯಾನ ನಡೆಯಲಿದೆ. ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಜಾಗೃತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ. ಇದರೊಂದಿಗೆ ಚರ್ಚಾ ಗೋಷ್ಠಿಗಳು, ವಿವಿಧ ಸ್ಪರ್ಧೆಗಳನ್ನೂ ಸಂಘಟಿಸಲಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಶಗುಫ್ತಾ ಲಾಡ್‌ಜಿ, ನಗರ ಘಟಕದ ಅಧ್ಯಕ್ಷ ಹಲೀಮಾ ಸರಾಫ್, ಸಾಹಿಸ್ತಾ ಪಠಾಣ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.