ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಮೃಣಾಲ್‌

Published 4 ಮೇ 2024, 4:57 IST
Last Updated 4 ಮೇ 2024, 4:57 IST
ಅಕ್ಷರ ಗಾತ್ರ

ಬೆಳಗಾವಿ: ‘ಜನಸ್ನೇಹಿ, ರೈತ ಸ್ನೇಹಿ, ಉದ್ಯಮ ಸ್ನೇಹಿಯಾಗಿ ಬೆಳಗಾವಿಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಭರವಸೆ ನೀಡಿದ್ದಾರೆ. ಕ್ಷೇತ್ರಕ್ಕಾಗಿ ಅವರು ಪ್ರತ್ಯೇಕ ಪ್ರಣಾಳಿಕೆಯನ್ನೂ ಸಿದ್ಧಪಡಿಸಿದ್ದಾರೆ.

ಬೆಳಗಾವಿಯನ್ನು ನೆಮ್ಮದಿಯ ಮತ್ತು ಸುರಕ್ಷಿತ ಜಿಲ್ಲೆಯಾಗಿ ಅಭಿವೃದ್ಧಿಪಡಿಸುವುದು, ಬೇಡದ ಕಾರಣಕ್ಕಾಗಿ ಬೆಳಗಾವಿಯ ವ್ಯಾಪಾರ ವ್ಯವಹಾರ ಸ್ಥಬ್ಧವಾಗಬಾರದು. ಸೌಹಾರ್ದಯುತ ವಾತಾವರಣ, ಜೊತೆಗೆ ಜನಸ್ನೇಹಿ, ರೈತಸ್ನೇಹಿ, ಉದ್ಯಮ ಸ್ನೇಹಿಯನ್ನು ಬೆಳೆಸುವುದು ನನ್ನ ಕನಸು ಎಂದು ಅವರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಹೊಸ ರಸ್ತೆಗಳ ನಿರ್ಮಾಣ, ಬಾಂದಾರಗಳ ನಿರ್ಮಾಣ, ಸಮರ್ಪಕ ಸಾರಿಗೆ ವ್ಯವಸ್ಥೆ, ಶಾಲಾ ಕೊಠಡಿ, ಕಾಂಪೌಂಡ್, ಆಟದ ಮೈದಾನಗಳ ನಿರ್ಮಾಣಗಳ ಮೂಲಕ ಮಕ್ಕಳ ಶೈಕ್ಷಣಿಕ ಅವಕಾಶಗಳ ವಿಸ್ತರಣೆ, ಜಿಮ್ ಉಪಕರಣ, ಕ್ರೀಡಾ ಸಾಮಗ್ರಿ, ವಿಜ್ಞಾನ ಉಪಕರಣಗಳ ವಿತರಣೆ, ಮಹಿಳೆಯರು, ದುರ್ಬಲರು, ಅಸಹಾಯಕರಿಗೆ ಸಹಾಯ, ಉದ್ಯಮಗಳಿಗೆ ಸೂಕ್ತ ನೆರವು, ನೂರಕ್ಕೂ ಹೆಚ್ಚು ದೇವಸ್ಥಾನಗಳ ನಿರ್ಮಾಣ, ಜೀರ್ಣೋದ್ಧಾರಕ್ಕೆ ನೆರವು, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಸಾವಿರಾರು ಅಭಿವೃದ್ಧಿ ಕೆಲಸಗಳು ಬೆಳಗಾವಿ ಗ್ರಾಮೀಣ ವಿಧಾನಸಭಾ  ಕ್ಷೇತ್ರದಲ್ಲಾಗಿವೆ ಎಂದು ಅವರು ತಿಳಿಸಿದ್ದಾರೆ.

‍ಪ್ರಣಾಳಿಕೆಯಲ್ಲೇನಿದೆ

 • ಇರುವ ಉದ್ಯಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ, ಜಿಲ್ಲೆಗೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರುವಂತೆ ಮಾಡುವುದು. ಸಕಲ ಸೌಲಭ್ಯವನ್ನೊಳಗೊಂಡ ಲ್ಯಾಂಡ್ ಬ್ಯಾಂಕ್ ಸಿದ್ಧಪಡಿಸುವ ಮೂಲಕ ಬೃಹತ್ ಉದ್ಯಮಗಳನ್ನು ಆಕರ್ಷಿಸುವುದು.

 • ಹುಬ್ಬಳ್ಳಿ– ಬೆಳಗಾವಿ ಮಾರ್ಗದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆ, ಹುಬ್ಬಳ್ಳಿ– ಧಾರವಾಡ– ಬೆಳಗಾವಿ ತ್ರಿವಳಿ ನಗರವಾಗಿ ಅಭಿವೃದ್ಧಿ.

 • ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಹಿನ್ನೆಲೆಯಲ್ಲಿ ಪೂರಕವಾದ ಕೌಶಾಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ.

 • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್  ಸೇರಿದಂತೆ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಸ್ಥಾಪನೆಗೆ ಯತ್ನ.

 • ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಯೋಜನೆ ರೂಪಿಸಿ, ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಾರ್ಯರೂಪಕ್ಕೆ ತರುವುದು.

 • ಮೆಡಿಕಲ್ ಟೂರಿಸಂ ಮತ್ತು ರಕ್ಷಣಾ ಇಲಾಖೆಗೆ ಪೂರಕವಾದ ಉತ್ಪನ್ನಗಳ ಉತ್ಪಾದನೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ.

 • ಪ್ರತಿಭಾ ಪಲಾಯನ ತಡೆದು, ಈ ಭಾಗದ ಯುವಕರು ಇಲ್ಲೇ ಉದ್ಯಮ ಸ್ಥಾಪಿಸುವ ವ್ಯವಸ್ಥೆ ಕಲ್ಪಿಸುವುದು.

 • ಜಿಲ್ಲೆಗೆ ಜನ ಮತ್ತು ಸರಕು ಸಾಗಾಣಿಕೆ ರೈಲ್ವೆ ಸಂಪರ್ಕ ಅಭಿವೃದ್ಧಿಪಡಿಸುವುದು.

 • ಬೆಳಗಾವಿ– ಧಾರವಾಡ ರೈಲ್ವೆ ಲೈನ್ ಕಾಮಗಾರಿಗೆ ವೇಗ ನೀಡಿ, ಆದಷ್ಟು ಶೀಘ್ರ ಕಾರ್ಯಾರಂಭಿಸುವಂತೆ ಮಾಡುವುದು.

 • ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ತುರ್ತು ನಿಗಾವಹಿಸುವುದು.

 • ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಶೀತಲೀಕರಣ ಘಟಕ ನಿರ್ಮಾಣ ಮತ್ತು ನೇರವಾಗಿ ರಫ್ತು ಮಾಡಲು ಅಗತ್ಯವಿರುವ ನೆರವು ಒದಗಿಸುವುದು.

 • ರೇರಾ ಪ್ರಾದೇಶಿಕ ಕಚೇರಿ ಸ್ಥಾಪಿಸುವುದು. ರಿಯಲ್ ಎಸ್ಟೇಟ್ ಅನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸುವಂತೆ ಮಾಡುವುದು.

 • ಪ್ರತಿ ತಾಲ್ಲೂಕಿನಲ್ಲಿ ಪ್ರತಿ ವರ್ಷ ಬೃಹತ್ ಉದ್ಯೋಗ ಮೇಳ ಮತ್ತು ಕೃಷಿ ಮೇಳ.

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ನನ್ನ ತಾಯಿ ಮಾದರಿ ಮಾಡಿದ್ದಾರೆ. ಅದೇ ರೀತಿ ನಾನು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಒತ್ತುಕೊಡುತ್ತೇನೆ
- ಮೃಣಾಲ್‌ ಹೆಬ್ಬಾಳಕರ ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT