ಶುಕ್ರವಾರ, ಫೆಬ್ರವರಿ 26, 2021
20 °C

ಎಂಎಸ್‌ಎಂಇ ವ್ಯಾಖ್ಯಾನ ಪರಿಷ್ಕರಣೆ: ಧರಣಿಗೆ ನಿರ್ಧಾರ– ಬಸವರಾಜ ಜವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಕೇಂದ್ರ ಸರ್ಕಾರವು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ವ್ಯಾಖ್ಯಾನ ಪರಿಷ್ಕರಣೆಗೆ ಮುಂದಾಗಿದೆ. ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ ತಂದೊಡ್ಡುವ ಈ ಬದಲಾವಣೆಗೆ ನಮ್ಮ ವಿರೋಧವಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಬಸವರಾಜ ಎಸ್. ಜವಳಿ ಸೋಮವಾರ ಇಲ್ಲಿ ತಿಳಿಸಿದರು.

‘ಕೇಂದ್ರದ ಈ ಕ್ರಮ ವಿರೋಧಿಸಿ ದಕ್ಷಿಣ ಹಾಗೂ ಉತ್ತರದ ರಾಜ್ಯಗಳ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರ ಸಮಾವೇಶವನ್ನು ಹಂತ ಹಂತವಾಗಿ ಆಯೋಜಿಸಲಾಗುವುದು. ನ. 15ರ ನಂತರ ನವದೆಹಲಿಯಲ್ಲಿ ಧರಣಿ ನಡೆಸಿ, ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಎಂಎಸ್‌ಎಂಇಗಳನ್ನು ಉದ್ಯೋಗಿಗಳ ಸಂಖ್ಯೆ, ಉದ್ಯೋಗ ಹಾಗೂ ವಹಿವಾಟು ಸಂಯೋಜನೆ ಆಧಾರದ ಮೇಲೆ ವರ್ಗೀಕರಣ ಮಾಡಲಾಗುತ್ತದೆ. ಆದರೆ, ಉದ್ದೇಶಿತ ವ್ಯಾಖ್ಯಾನದ ಪ್ರಕಾರ ₹ 250 ಕೋಟಿ ವಹಿವಾಟು ನಡೆಸುವ ಎಲ್ಲವನ್ನೂ ಎಂಎಸ್‌ಎಂಇ ಎಂದು ಪರಿಗಣಿಸುವುದಾಗಿ ಹೇಳಲಾಗುತ್ತಿದೆ. ಇದರಿಂದ ಉತ್ಪಾದನಾ ವಲಯಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವ ಎಂಎಸ್ಎಂಇ ವಲಯಕ್ಕೆ ಭಾರಿ ಹೊಡೆತ ಬೀಳುತ್ತದೆ. ಅನರ್ಹರು ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ, ಯಥಾಸ್ಥಿತಿ ಕಾಪಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ’ ಎಂದು ಹೇಳಿದರು.

ಪ್ರಚಾರಕ್ಕಷ್ಟೇ ಸೀಮಿತಿ

‘ಮುದ್ರಾ, ಸ್ಟಾರ್ಟ್‌ ಅಪ್, ಸ್ಟಾಂಡ್‌ಅಪ್‌ ಮೊದಲಾದ ಯೋಜನೆಗಳು ನಮ್ಮಲ್ಲಿ ಲಭ್ಯವಿಲ್ಲ ಎಂದು ಎಲ್ಲ ಬ್ಯಾಂಕ್‌ಗಳವರು ಹೇಳುತ್ತಾರೆ. ಕೇಂದ್ರ ಸರ್ಕಾರದಿಂದ ಪ್ರಚಾರದ ಸಾಹಸವಷ್ಟೇ ನಡೆಯುತ್ತಿದೆ’ ಎಂದು ಟೀಕಿಸಿದರು.

‘ಕೈಗಾರಿಕೆಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕೆಎಸ್‌ಎಫ್‌ಸಿ ಜೊತೆಗೆ ಬ್ಯಾಂಕ್‌ಗಳಲ್ಲೂ ಜಾರಿಗೊಳಿಸಬೇಕು. ವ್ಯಾಟ್‌ ಇದ್ದಾಗ ಜಾಬ್‌ ವರ್ಕ್‌ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಜಿಎಸ್‌ಟಿ ಜಾರಿಯಾದ ನಂತರ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದು, ಸೂಕ್ಷ್ಮ ಹಾಗೂ ಸಣ್ಣ ಘಟಕಗಳಿಗೆ ಹೊರೆಯಾಗಿದೆ. ಹೀಗಾಗಿ, ತೆರಿಗೆಯನ್ನು ಶೇ 5ಕ್ಕೆ ಇಳಿಸಬೇಕು’ ಎಂದು ಆಗ್ರಹಿಸಿದರು.

ಅದಾಲತ್

‘ಲಭ್ಯ ಅವಕಾಶಗಳ ಸದ್ಬಳಕೆಗಾಗಿ‘ ಇ–ಕಾಮರ್ಸ್‌ ಬಿ2ಬಿ ಜಾಲ’ ಎನ್ನುವ ವಿಶೇಷ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು, ಕಲಬುರಗಿ, ಮಂಗಳೂರು, ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಕೈಗಾರಿಕಾ ಅದಾಲತ್‌ಗಳನ್ನು ನಡೆಸಲಾಗುವುದು. ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಾಬಸ್‌ಪೇಟೆಯಲ್ಲಿ ಉತ್ಕೃಷ್ಟತೆ ಹಾಗೂ ಅನ್ವೇಷಣಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಇಂತಹ ಕೇಂದ್ರ ನಿರ್ಮಿಸಲು ಯೋಜಿಸಲಾಗಿದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು