ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನ ಕಳೆದುಕೊಂಡ ಪರಿಸರ

Published 5 ಜೂನ್ 2024, 14:59 IST
Last Updated 5 ಜೂನ್ 2024, 14:59 IST
ಅಕ್ಷರ ಗಾತ್ರ

ಮೂಡಲಗಿ: ‘ಹವಾಮಾನ ವೈಪರೀತ್ಯದಿಂದ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದ್ದು, ಸರಿಯಾದ ಸಮಯಕ್ಕೆ ಮಳೆ ಬಾರದೆ ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ಮೂಡಲಗಿ ಸೆಷನ್ಸ್‌ ಹಾಗೂ ಜೆಎಂಎಎಫ್‌ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.

ಪಟ್ಟಣದ ಸೆಷನ್ಸ್‌ ಹಾಗೂ ಜೆಎಂಎಫ್‌ ನ್ಯಾಯಾಲಯದ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಲಯದ ಆಶ್ರಯದಲ್ಲಿ ಸಸಿ ನೆಟ್ಟು, ನೀರುಣಿಸಿ ಮಾತನಾಡಿದರು.

ಉಪ ವಯಲದ ಅರಣ್ಯಾಧಿಕಾರಿ ಅಶೋಕ ಮಾಧುರಿ ಮಾತನಾಡಿ, ‘ಪರಿಸರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪರಿಸರ ದಿನಾಚರಣೆ ಅಂಗವಾಗಿ ಸುಮಾರು 500 ಸಸಿಗಳನ್ನು ನೆಟ್ಟು ಆರೈಕ ಮಾಡಲಾಗುವುದು’ ಎಂದರು.

ಇಲಾಖೆಯ ಗಸ್ತು ಅಧಿಕಾರಿಗಳಾದ ಮಹಾಂತೇಶ ಹಿಪ್ಪರಗಿ, ಕವನ್ ನಂದಿ, ವಕೀಲರ ಸಂಘದ ಅಧ್ಯಕ್ಷ ಆರ್.ಆರ್. ಭಾಗೋಜಿ,  ಸಹ ಕಾರ್ಯದರ್ಶಿ ಎಸ್.ವೈ. ಸಣ್ಣಕ್ಕಿ, ಖಂಜಾಚಿ ಆರ್.ಎಸ್. ತೋಳಮರಡಿ, ನ್ಯಾಯಾಲಯದ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT