‘ವಿಶ್ವಕರ್ಮ ಸಮಾಜವು ಶ್ರೇಷ್ಠವಾಗಿದೆ. ಸಮಾಜದವರು ಕಲಾ ನೈಪುಣ್ಯದಿಂದ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಸಾನ್ನಿಧ್ಯ ವಹಿಸಿದ್ದ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು. ಮುಕ್ತಾನಂದ ಸ್ವಾಮೀಜಿ ಮಾತನಾಡಿ ‘ಉಪನಯನದಲ್ಲಿ ಪಾಲ್ಗೊಂಡ ವಟುಗಳು ನಮ್ಮ ನಾಡಿನ ಧಾರ್ಮಿಕ ಸಂಸ್ಕಾರ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.