ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಮಾನತೆ ಸಾರಿದ ಬಸವಣ್ಣ’ 

Published 10 ಮೇ 2024, 15:05 IST
Last Updated 10 ಮೇ 2024, 15:05 IST
ಅಕ್ಷರ ಗಾತ್ರ

ಮೂಡಲಗಿ: ‘ಸಾಕ್ರೇಟಿಸ್‌ನಿಂದ ಬಸವಣ್ಣನ ವರೆಗಿನ ಜ್ಞಾನ ನಮ್ಮನ್ನು ಮನುಷ್ಯರನ್ನಾಗಿ ರೂಪಿಸಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕನಾದ ಬಸವಣ್ಣನವರು ತಾವು ಬೆಳೆಯುವ ಜೊತೆಗೆ ತಮ್ಮ ಸುತ್ತಲಿನ ಸಮಾಜವನ್ನು ವೈಚಾರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬೆಳೆಸಿದ್ದಾರೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಿಂದ ಏರ್ಪಡಿಸಿದ್ದ ಬಸವಣ್ಣ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ ಮತ್ತು ‘ಅಭಿಜಾತ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು ಬಸವಣ್ಣನವರು ಸಮಾನತೆಯನ್ನು ಸಾರಿ ಸಾಮಾಜಿಕ ನ್ಯಾಯ ನೀಡಿರುವ ವಿಶ್ವಗುರು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎಂದರು.

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಎಂ.ಗಂಗಾಧರಯ್ಯ ಮಾತನಾಡಿದರು.

ಅಕ್ಕಲಕೋಟ ಸಿ.ಬಿ. ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗುರುಲಿಂಗಪ್ಪ ಧಭಾಲೆ, ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಭೀಮಪ್ಪ ಕಡಾಡಿ, ಎಸ್.ಎಂ. ಖಾನಾಪೂರ ಇದ್ದರು.

ವಿ.ಎಸ್. ಮಾಳಿ, ಹ.ಮಾ. ನಾಗಾರ್ಜುನ, ಪ್ರೊ.ಕೆ. ಮಲ್ಲಿಕಾರ್ಜುನ, ಹರೀಶ ಕೋಲ್ಕಾರ, ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆಯಲ್ಲಿ ಐದು ಗೋಷ್ಠಿಗಳು ಜರುಗಿದವು.

ಸುಪ್ರಿಯಾ ಮಠಪತಿ ಪ್ರಾರ್ಥಿಸಿದರು. ಪ್ರಾಚಾರ್ಯ ಸುರೇಶ ಹನಗಂಡಿ ಸ್ವಾಗತಿಸಿದರು. ಪ್ರೊಶಂಕರ ನಿಂಗನೂರ ನಿರೂಪಿಸಿದರು. ಗಜಾನನ ನಾಯ್ಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT