ಶನಿವಾರ, ನವೆಂಬರ್ 28, 2020
25 °C

ಜಾತಿಗೊಂದು ನಿಗಮ ಬೇಡ: ಗವಿಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಜ್ಯ ಸರ್ಕಾರವು ಜಾತಿಗೊಂದು ನಿಗಮ ಅಥವಾ ಪ್ರಾಧಿಕಾರ ಸ್ಥಾಪಿಸುವುದು ತರ್ಕ ಬದ್ಧ ಎನಿಸುವುದಿಲ್ಲ’ ಎಂದು ಲೇಖಕ ಬಿ.ಎಸ್. ಗವಿಮಠ ಹೇಳಿದ್ದಾರೆ.

‘ಸಮಗ್ರ ಕರ್ನಾಟಕದಲ್ಲಿ ಬಹಳಷ್ಟು ಜಾತಿ, ಉಪ ಜಾತಿಗಳಿವೆ. ತೀರಾ ಹಿಂದುಳಿದ ಸಮುದಾಯಗಳಿವೆ. ಹೀಗಾಗಿ ನೂರಾರು ನಿಗಮಗಳನ್ನು ಹುಟ್ಟು ಹಾಕಿ ₹ 50 ಕೋಟಿ ಅಥವಾ ₹ 100 ಕೋಟಿ ಒದಗಿಸಿದರೆ ಆ ಸಮುದಾಯಗಳು ಅಭಿವೃದ್ಧಿ ಹೊಂದಲಾರವು. ಆದ್ದರಿಂದ ಜಾತಿ, ಧರ್ಮ ಆಧರಿಸದೆ ಆದಾಯ ಆಧರಿಸಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಜಾತಿ ಮತ್ತು ಉಪ ಜಾತಿಗಳವರಿಗೆ ಮೀಸಲಾತಿ ಹಾಗೂ ಇತರ ಒಬಿಸಿ ಸೌಲಭ್ಯಗಳನ್ನು ನೀಡಿದರೆ ಯಾವುದೇ ಸಮಸ್ಯೆ ಆಗಲಾರದು’ ಎಂದಿದ್ದಾರೆ.

‘ವೀರಶೈವ-ಲಿಂಗಾಯತ, ಬ್ರಾಹ್ಮಣ ಅಥವಾ ಮರಾಠಾ ಅಭಿವೃದ್ಧಿ ನಿಗಮಗಳಿಗೆ ಮಾತ್ರ ಅನುದಾನ ಒದಗಿಸಿದರೆ ಯಾರ ಉದ್ಧಾರವೂ ಆಗಲಾರದು. ಅವುಗಳ ಹೆಸರು ಬದಲಿಸಿದರೂ ಏನೂ ಪ್ರಯೋಜನವಾಗದು. ಸರ್ಕಾರ ಈ ನಿಟ್ಟಿನಲ್ಲಿ ಮರು ಯೋಚಿಸಲಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಷಿಕೋತ್ಸವ ಇಂದು

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ನ. 21ರಂದು ಮಧ್ಯಾಹ್ನ 3.30ಕ್ಕೆ ಇಲ್ಲಿನ ರಾಮದೇವ ಹೋಟೆಲ್ ಸಮೀಪದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.

ಜ್ಯೋತಿ ಬದಾಮಿ ದತ್ತಿ ಪುಸ್ತಕ ಪ್ರಶಸ್ತಿಯನ್ನು ಶಶಿಕಲಾ ನಾಡಗೌಡರ (ಕ್ಷಮಯಾಧರಿತ್ರಿ ಕಾದಂಬರಿ), ರಾಚಮ್ಮ ಪಾಟೀಲ ಸ್ಮರಣಾರ್ಥ ದತ್ತಿ ಪುಸ್ತಕ ಪ್ರಶಸ್ತಿಯನ್ನು ವಾಸಂತಿ ಮೇಳೇದ (ತ್ರಿದಳ ಕೃತಿ) ಅವರಿಗೆ ಮತ್ತು ಎಂ.ಬಿ. ತಿರ್ಲಾಪುರ ಸ್ಮರಣಾರ್ಥ ಆದರ್ಶ ತಂದೆ ಪ್ರಶಸ್ತಿಯನ್ನು ಸಾಹಿತಿ ಎಲ್.ಎಸ್. ಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಗುವುದು. ‘ದಾಸೋಹಂ’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಗುವುದು. ಡಾ.ಗುರುದೇವಿ ಹುಲೆಪ್ಪನವರಮಠ ಪರಿಚಯಿಸುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.