ನೇಸರಗಿ: ಮಹಿಳೆಯರು ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವುದು ಅವಶ್ಯವಾಗಿದೆ ಎಂದು ಬಿ.ಐ. ಕುಂದರನಾಡ ಹೇಳಿದರು.
ಸಮೀಪದ ನಾಗನೂರ ಗ್ರಾಮದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಆಹಾರ ಸೇವನೆಯಿಂದ ಒಳ್ಳೆಯ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಪ್ರತಿದಿನ ಉತ್ತಮ ಪೌಷ್ಠಿಕಾಂಶದ ಆಹಾರ ಸೇವಿಸಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಬಸವ್ವ ಶಿರಸಂಗಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜತಾ ಪಾಟೀಲ, ರವಿಂದ್ರ ಮದಾಳೆ, ವಿಜಯಲಕ್ಷ್ಮಿ ಇದ್ದರು. ಜಾನಕಿದೇವಿ ಭದ್ರನ್ನವರ ನಿರೂಪಿಸಿದರು. ಸುಶೀಲಾ ದೇಸಾಯಿ ವಂದಿಸಿದರು.