ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಪುಡಿ ಮಾರಾಟ ಪ್ರಕರಣ: ಕಿರಣ ವಿರುದ್ಧ ಮತ್ತೊಂದು ಪ್ರಕರಣ

ಭ್ರಷ್ಟಾಚಾರ ಆರೋಪ
Last Updated 3 ಜುಲೈ 2021, 12:10 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ಕಾರಿನಲ್ಲಿದ್ದ ₹ 2.50 ಕೋಟಿ ಮೌಲ್ಯದ 4 ಕೆ.ಜಿ. 900 ಗ್ರಾಂ. ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಹುಬ್ಬಳ್ಳಿ ಮೂಲಕ ಕಿರಣ ವೀರನಗೌಡರ ವಿರುದ್ಧ ಮತ್ತೊಂದು ಪ್ರಕರಣವು ಇಲ್ಲಿನ ಕ್ಯಾಂಪ್‌ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದಾಖಲಾಗಿದೆ.

ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳೇ ಈ ದೂರನ್ನೂ ನೀಡಿದ್ದಾರೆ. ಇದು ‘ಕ್ಷೀರಭಾಗ್ಯ’ ಯೋಜನೆಯ ಹಾಲಿನ ಪುಡಿ ಮಾರಾಟ ಹಗರಣಕ್ಕೆ ಸಂಬಂಧಿಸಿದ್ದಾಗಿದೆ.

‘ಹಗರಣ ಮುಚ್ಚಿ ಹಾಕಲು ಇಲ್ಲಿ ವ್ಯವಹಾರ ನಡೆದಿದೆ. ಅದರಲ್ಲಿ ಕಿರಣ ವೀರನಗೌಡ ಪಾತ್ರವೂ ಇದೆ’ ಎಂಬ ಆರೋಪದ ಮೇಲೆ ಸಿಐಡಿಯು ಅವರನ್ನು 2ನೇ ಆರೋಪಿಯನ್ನಾಗಿಸಿ ದೂರು ನೀಡಿದೆ. ಮೊದಲ ಆರೋಪಿಯನ್ನಾಗಿ ಅಪರಿಚಿತ ಪೊಲೀಸ್ ಆಧಿಕಾರಿ ಎಂದು ದೂರಿನಲ್ಲಿ ತಿಳಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ, ಕಿರಣ ವಿರುದ್ಧ ದಾಖಲಾದ 4ನೇ ಪ್ರಕರಣ ಇದಾಗಿದೆ. ಅವರೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ’ ಎನ್ನಲಾಗುತ್ತಿದೆ.

ಆರೋಪಿಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿ, ವ್ಯವಹಾರ ನಡೆಸುತ್ತಿದ್ದ ಆರೋಪ ಅವರ ಮೇಲಿದೆ.

ಏನಿದು ಪ್ರಕರಣ?:
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಉಗ್ರಾಣವೊಂದರಲ್ಲಿ ₹36 ಲಕ್ಷ ಮೌಲ್ಯದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮತ್ತು ಮಾರಾಟದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಈಚೆಗೆ ಸಿಐಡಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಪತಿ, ಬಿಜೆಪಿ ಮುಖಂಡ ಶಿವಾನಂದ ಅಂಗಡಿ ಅವರನ್ನು ಸಿಐಡಿ ಪೊಲೀಸರು ಜೂನ್‌ 8ರಂದು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಶಿವಾನಂದ ನೀಡಿದ ಮಾಹಿತಿ ಆಧರಿಸಿ ಕಿರಣ ವಿರುದ್ಧ ಪ್ರಕರಣ ದಾಖಲಾಗಿದೆ.

‘ಹಗರಣ ಮುಚ್ಚಿ ಹಾಕಲು ಕಿರಣ ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಕ್ಯಾಂಪ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, 2020ರ ನವೆಂಬರ್‌ನಲ್ಲಿ ಹಣಕಾಸಿನ ವ್ಯವಹಾರ ನಡೆಸಿದ್ದರು ಮತ್ತು ಲಂಚ ಕೊಡಿಸಿದ್ದರು ಎನ್ನುವುದು ತಿಳಿದುಬಂದಿದೆ. ಹೀಗಾಗಿ, ಈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT