ಬೆಳಗಾವಿ: ಆನ್ಲೈನ್ ಗೇಮ್ ಹಾಗೂ ಐಷಾರಾಮಿ ಕಾರು ಖರೀದಿ ಹೆಸರಿನಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ₹75 ಲಕ್ಷ ವಂಚಿಸಿದ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ.

ಇಲ್ಲಿನ ಗಣೇಶಪುರ ಸರಸ್ವತಿ ನಗರದ ನಿವಾಸಿ ದೀಪಕ್ ಆನಂದ ಪಾಟೀಲ ಅವರು ಆನ್ಲೈನ್ ಗೇಮಿಂಗ್ ಆಮಿಷಕ್ಕೆ ಒಳಗಾಗಿ ₹40.03 ಲಕ್ಷ ಹಣ ಕಳೆದುಕೊಂಡಿದ್ದಾರೆ.
.ಬೆಳಗಾವಿ: ಮಾಸಿಕ ₹15 ಸಾವಿರ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ.
2023ರ ನವೆಂಬರ್ 21ರಂದು ಫೇಸ್ಬುಕ್ ಜಾಹೀರಾತು ಮೂಲಕ ಆನ್ಲೈನ್ ಆಟದ ಲಿಂಕ್ ಬಳಸಿ ಲಾಗಿನ್ ಆಗಿದ್ದರು. ಆರಂಭದಲ್ಲಿ ಸ್ವಲ್ಪ ಹಣ ಸಂದಾಯವಾಗಿತ್ತು. ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಲಕ್ಷಾಂತರ ಹಣ ಹೂಡಿಕೆ ಮಾಡಿದರು. ಆ ಬಳಿಕ ಯಾರೂ ಸಂಪರ್ಕಕ್ಕೆ ಬರದ ಕಾರಣಕ್ಕೆ ಇದು ನಕಲಿ ಗೇಮಿಂಗ್ ಆ್ಯಪ್ ಎಂಬುದು ತಿಳಿದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾರು ಖರೀದಿಯಲ್ಲಿ ಮೋಸ: ನಗರದ ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲ್ಕರ ಅವರು ಫೇಸ್ಬುಕ್ ಜಾಹೀರಾತಿನಲ್ಲಿ ಬಂದ ಮಾಹಿತಿ ಆಧರಿಸಿ, ಐಶಾರಾಮಿ ಕಾರೊಂದನ್ನು ಕೆಲ ತಿಂಗಳ ಹಿಂದೆ ಖರೀದಿಸಿದ್ದರು.
.ಬೆಳಗಾವಿ: ಪ್ರಭಾಕರ ಕೋರೆಗೆ ವಿದ್ಯಾ ವಾರೇಣ್ಯ ಪ್ರಶಸ್ತಿ ಪ್ರದಾನ.
ಹರಿಯಾಣದ ಗುರುಗ್ರಾಮ್ನ ಅಸೀಮ್ ಪುಪನೇಜಾ ಎನ್ನುವವರು ಮೊಬೈಲ್ ಸಂಪರ್ಕ ಸಂಖ್ಯೆ ನೀಡಿದ್ದರು. ₹50 ಸಾವಿರ ಮುಂಗಡ ಹಾಕಿ, ಬಳಿಕ ₹35 ಲಕ್ಷ ಕೊಟ್ಟು ಕಾರು ಖರೀದಿಸಿದ್ದರು. ಹೆಚ್ಚುವರಿಯಾಗಿ ₹40 ಸಾವಿರವನ್ನೂ ಆರೋಪಿ ಪಡೆದಿದ್ದರು.

ಕಾರು ಡಾ.ಗಿರೀಶ ಅವರ ಹೆಸರಿಗೆ ವರ್ಗಾವಣೆಯಾಗಿದೆ. ಆದರೆ, ಅದನ್ನು ನೀಡಿದ ವ್ಯಕ್ತಿ ನಿಜವಾದ ಕಾರಿನ ಮಾಲೀಕರಲ್ಲ ಎಂಬುದು ನಂತರ ಗೊತ್ತಾಗಿದೆ. ದೂರು ನೀಡಿದ ಡಾ.ಗಿರೀಶ ಅವರು ‘ಇದು ದೀರ್ಘ ಕಾಲ ನೀರಿನಲ್ಲಿ ಮುಳುಗಿದ್ದ ‘ಟೋಟಲ್ ಲಾಸ್’ ದರ್ಜೆಯ ವಾಹನವಾಗಿದೆ. ಅನಗತ್ಯ ಹೆಚ್ಚುವ ಹಣ ಪಡೆಯಲಾಗಿದೆ’ ಎಂದು ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ: ನೀರಿಗಿಂತ ನಾಯಿಗಳಿಗೇ ಹೆಚ್ಚು ವೆಚ್ಚ !.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.