ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿನಸೇನ ಭಟ್ಟಾರಕರ ಪಟ್ಟಾಭಿಷೇಕ 25ರಂದು

ಕೊಲ್ಹಾಪುರ ಜಿಲ್ಲೆಯ ನಾಂದಣಿ ಮಠದಲ್ಲಿ ಮಹೋತ್ಸವ
Last Updated 18 ಜನವರಿ 2019, 9:08 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಮಠ ಗಲ್ಲಿಯಲ್ಲಿರುವ ಚಿಕ್ಕಬಸದಿಯ ಕೇಂದ್ರ ಸ್ಥಾನ ಹಾಗೂ ಜೈನರ ಶ್ರದ್ಧಾ ಕೇಂದ್ರ ನಾಂದಣಿ ಮಠದ ನೂತನ ಭಟ್ಟಾರಕರಾಗಿ ಆಯ್ಕೆಯಾಗಿರುವ ಜಿನಸೇನರ ಪಟ್ಟಾಭಿಷೇಕ ಮಹೋತ್ಸವವನ್ನು ಜ. 25ರಂದು ಕೊಲ್ಹಾಪುರ ಜಿಲ್ಲೆಯ ನಾಂದಣಿ ಮಠದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ’ ಎಂದು ಮಠದ ಟ್ರಸ್ಟಿ ರಾಜೀವ ದೊಡ್ಡಣ್ಣವರ ತಿಳಿಸಿದರು.

‘ಬೆಳಗಾವಿ, ತೇರದಾಳ, ಕೊಲ್ಹಾಪುರ ಮತ್ತು ನಾಂದಣಿಯಲ್ಲಿ ಪೀಠಗಳನ್ನು ಹೊಂದಿದ ಈ ಮಠ800 ವರ್ಷಗಳ ಇತಿಹಾಸ ಹೊಂದಿದೆ. ಈ 4 ಪೀಠಗಳ ವ್ಯಾಪ್ತಿಯಲ್ಲಿ 734 ಗ್ರಾಮಗಳು ಬರುತ್ತವೆ. ಅಲ್ಲಿನ ಭಕ್ತರು ಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ಮಠದ ಮಾರ್ಗದರ್ಶನದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಮ್ಮಲ್ಲಿ ಸಾಮಾನ್ಯವಾಗಿ ನೂತನ ಪೀಠಾಧಿಪತಿಯನ್ನು ನೇಮಿಸುವ ಪದ್ಧತಿ ಇದೆ. ಮಠದ ಇತಿಹಾಸದಲ್ಲಿ ಇದೇ ಮೊದಲಿಗೆ ಸಮಸ್ತ ಜೈನ ಸಮಾಜ ಹಾಗೂ ದೇಶದ ಎಲ್ಲ ಭಟ್ಟಾರಕರ ಮಾರ್ಗದರ್ಶನದಲ್ಲಿ ನೂತನ ಪೀಠಾಧಿಪತಿ ಆಯ್ಕೆ ಮಾಡಲಾಗಿದೆ. ಅಥಣಿ ತಾಲ್ಲೂಕು ಸಪ್ತಸಾಗರದ ಪ್ರತೀಕ ಪ್ರಕಾಶ ಸಸಾಲಟೆ ನೂತನ ಭಟ್ಟಾರಕರಾಗಿ ಆಯ್ಕೆಯಾಗಿದ್ದಾರೆ’ ಎಂದು ವಿವರಿಸಿದರು.

‘ಅವರು ಬಾಲ್ಯದಿಂದಲೂ ಧರ್ಮದ ಬಗ್ಗೆ ಆರ್ಕಷಿತರಾಗಿ ಮುನಿಗಳ ಸೇವೆಯಲ್ಲಿ ತೊಡಗಿದ್ದಾರೆ. 2010ರಲ್ಲಿ ಬ್ರಹ್ಮಚಾರಿ ವ್ರತ ಕೈಗೊಂಡಿದ್ದಾರೆ. ಆಚಾರ್ಯ ಸುನಿಲಸಾಗರ ಮಹಾರಾಜರ ಶಿಷ್ಯರಾಗಿ ಧರ್ಮ ಜ್ಞಾನ ಪಡೆದು, 2018ರ ಡಿ.15ರಂದು ಶೇಡಬಾಳದಲ್ಲಿ ದೇವಸೇನ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದರು. ಅವರಿಗೆ ಜಿನಸೇನ ಎಂದು ನಾಮಕರಣ ಮಾಡಲಾಗಿದೆ. ಪಟ್ಟಾಭಿಷೇಕದ ಮೂಲಕ ನಾಂದಣಿ ಮಠದ ಪರಂಪರೆಯಂತೆ ಜಿನಸೇನ ಭಟ್ಟಾರಕ ಸ್ವಾಮೀಜಿ ಆಗಲಿದ್ದಾರೆ’ ಎಂದು ತಿಳಿಸಿದರು.

‘ಜ. 20ರಂದು ಅವರು ಮಠ ಪ್ರವೇಶಿಸುವರು. 23ರಿಂದ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. 25ರಂದು ಮುಖ್ಯ ಕಾರ್ಯಕ್ರಮವಿದೆ. ಅಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಎಲ್ಲ ಭಟ್ಟಾರಕರು ಮತ್ತು ಮುನಿಗಳು ಪಾಲ್ಗೊಳ್ಳುವರು’ ಎಂದರು.

ಸಮಾಜದ ಮುಖಂಡರಾದ ಅಪ್ಪಾಸಾಹೇಬ ಚೌಗುಲೆ, ಕೀರ್ತಿಕುಮಾರ ಕಾಗವಾಡ, ಚಿಕ್ಕ ಬಸದಿ ಟ್ರಸ್ಟ್ ಅಧ್ಯಕ್ಷ ಅಪ್ಪಾಸಾಹೇಬ ಕಲಮನಿ, ಸದಸ್ಯರಾದ ಶ್ರೀಪಾಲ ಖೆಮಲಾಪುರೆ, ಸತೀಶ ಗೌರಗೊಂಡ, ಅಪಯ್ಯ ಅಪ್ಪಣ್ಣವರ, ಅರ್ಜುನ ಚೌಗುಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT