ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಕ್ಕೇರಿ| ಜನರ ಪ್ರೀತಿ, ವಿಶ್ವಾಸ ನಿಖಿಲ್ ಗೆಲುವಿಗೆ ಕಾರಣ: ರಮೇಶ್ ಕತ್ತಿ

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿಕೆ
Published 22 ಮೇ 2023, 14:05 IST
Last Updated 22 ಮೇ 2023, 14:05 IST
ಅಕ್ಷರ ಗಾತ್ರ

ಹುಕ್ಕೇರಿ: ಕ್ಷೆತ್ರದ ಜನರು ಕತ್ತಿ ಕುಟುಂಬದ ಮೇಲಿರುವ ಪ್ರೀತಿ ಮತ್ತು ವಿಶ್ವಾಸದಿಂದ ನಿಖಿಲ್ ಕತ್ತಿ ಅವರನ್ನು 42 ಸಾವಿರಕ್ಕಿಂತ ಹೆಚ್ಚಿನ ಮತದಿಂದ ಆಯ್ಕೆ ಮಾಡಿದ್ದಕ್ಕೆ ತಮ್ಮ ಕುಟುಂಬ ಜನರಿಗೆ ಸದಾ ಋಣಿಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.

ಕ್ಷೇತ್ರದ ವಿವಿಧ ಭಾಗದ ಜನರು ನೀಡಿದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ತಮ್ಮ ಅಣ್ಣ ದಿ.ಉಮೇಶ್ ಕತ್ತಿ ನಿಧನರಾಗಿ 8 ತಿಂಗಳು ಗತಿಸಿದರೂ ಇನ್ನೂ ಜನರ ಮನಸಲ್ಲಿ ಉಳಿದಿದ್ದನ್ನು ನೋಡಿದರೆ, ಅವರ ಜನಪರ ಕಾಳಜಿ ಗೊತ್ತಾಗುತ್ತದೆ. ಅವರ ತಂದೆಯಂತೆ ಶಾಸಕ ನಿಖಿಲ್ ಕತ್ತಿ ಕೂಡಾ ಜನಪರ ಕೆಲಸ ಮಾಡುವಂತೆ ಮಾರ್ಗದರ್ಶನ ಮಾಡುವುದಾಗಿ ಹೇಳಿದರು.

ಹಿಡಕಲ್ ಡ್ಯಾಂ ಬಳಿಯ ₹160 ಕೋಟಿ ವೆಚ್ಚದ ‘ಉದ್ಯಾನ ಕಾಶಿ’ ಯೋಜನೆ, ಕಣಗಲಾ ಬಳಿಯ ₹100 ಕೋಟಿಯ ಗಾಜು ಕಾರ್ಖಾನೆ ಸ್ಥಾಪನೆ ಮತ್ತು ಪ್ರಗತಿ, ಸಂಗಮ ಬ್ಯಾರೇಜ ಬಳಿಯ ₹90 ಕೋಟಿ ವೆಚ್ಚದ ನೀರೆತ್ತುವ ಕಾಮಗಾರಿ ಸೇರಿದಂತೆ ಉಳಿದಿರುವ ಕಾಮಗಾರಿಗೆ ಹೆಚ್ಚು ಒತ್ತು ಕೊಟ್ಟು ಬೇಗನೆ ಮುಗಿಸಿ ಜನರಿಗೆ ಅನುಕೂಲ ಮಾಡುವ ಭರವಸೆ ನೀಡಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಹಿಡಕಲ್, ಬಿಡಿಸಿಸಿ ಬ್ಯಾಂಕ್ ನಿವೃತ್ತ ಉದ್ಯೋಗಿ ಎನ್.ಎಸ್.ಬಿರಾದಾರ ಪಾಟೀಲ, ಜಿನರಾಳಿ, ಬಸ್ತವಾಡದ ನೇಮಣ್ಣ ಮಗದುಮ್ಮ, ಆನಂದ ಲಕ್ಕುಂಡಿ, ಕಾಡಪ್ಪ ಮಗದುಮ್ಮ, ದಯಾನಂದ ವಂಟಮೂರಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT