ಮಂಗಳವಾರ, ಜುಲೈ 27, 2021
23 °C

‘ಕಾರ ಹುಣ್ಣಿಮೆ’ ಆಚರಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ಕೊರೊನಾ ಭೀತಿಯ ನಡುವೆಯೂ ‘ಕಾರ ಹುಣ್ಣಿಮೆ’ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರೈತರು ತಯಾರಿ ನಡೆಸಿದ್ದು ಮಂಗಳವಾರ ಇಲ್ಲಿನ ಸಂತೆಯಲ್ಲಿ ಕಂಡುಬಂತು.

ಹಬ್ಬಕ್ಕಾಗಿ ರೈತರು ಎತ್ತುಗಳು ಸೇರಿದಂತೆ ಜಾನುವಾರುಗಳನ್ನು ಸಿಂಗಾರ ಮಾಡಲು ಮುಖ್ಯ ಬಜಾರದಲ್ಲಿ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿದರು. ಮತಾಟಿ, ಮಗಡಾ, ಮೂಗುದಾರ, ಬಾರುಕೋಲು, ಗಂಟಿ, ಹಗ್ಗಗಳು ಸೇರಿದಂತೆ ಕೃಷಿ ಕೆಲಸಕ್ಕೆ ಬೇಕಾಗುವ ಸಾಮಗ್ರಿ ಮತ್ತು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಕನ್ನಾಳ, ಬನ್ನೂರ, ಕೊಟ್ಟಲಗಿ, ಕಕಮರಿ, ಫಡತರವಾಡಿ, ಹಾಲಳ್ಳಿ, ಕಿಲಾರದಡ್ಡಿ ಮೊದಲಾದ ಗ್ರಾಮಗಳ ಕೃಷಿಕರು ಬಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.