ಮಂಗಳವಾರ, ಸೆಪ್ಟೆಂಬರ್ 21, 2021
23 °C

ತೆಲಸಂಗ: ಕೆಲಸಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ (ಬೆಳಗಾವಿ ಜಿಲ್ಲೆ): ಸಮೀಪದ ಕನ್ನಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡುವಂತೆ ಆಗ್ರಹಿಸಿ ಮಹಿಳೆಯರು ಬುಟ್ಟಿಗಳು ಮೊದಲಾದ ಪರಿಕರಗಳೊಂದಿಗೆ ಗ್ರಾಮ ಪಂಚಾಯ್ತಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

‘ಸಸಿಗಳನ್ನು ನೆಡುವುದಕ್ಕಾಗಿ ಪಂಚಾಯ್ತಿಯಿಂದ ಆರು ಸಾವಿರ ಗುಂಡಿಗಳನ್ನು ಜೆಸಿಬಿ ಬಳಸಿ ತೋಡಿಸಿದ್ದೀರಿ. ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೀರಿ. ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘₹ 6 ಲಕ್ಷ ಲೂಟಿ ಮಾಡಲಾಗಿದೆ’ ಎಂದು ದೂರಿದರು. ಕೆಲವರು ಮಕ್ಕಳೊಂದಿಗೆ ಬಂದಿದ್ದರು.

‘ಜೆಸಿಬಿಯಿಂದ ಕೆಲಸ ಮಾಡಿಸಿದ್ದು ನಿಜ’ ಎಂದು ಪಿಡಿಒ ಎಂ.ಎಸ್. ಚೌದರಿ ಒಪ್ಪಿಕೊಂಡರು. ‘ಹಿಂದೆ ಆಗಿದ್ದು ಬಿಟ್ಟು ಬಿಡಿ. ಇಂದಿನಿಂದ ಹೊಸ ಕಾಮಗಾರಿಯಲ್ಲಿ ಕೆಲಸ ಕೊಡಲಾಗುವುದು’ ಎಂದು ತಿಳಿಸಿದರು.

ಮಧ್ಯಾಹ್ನ ಸ್ಥಳಕ್ಕೆ ಬಂದ ಅಥಣಿ ತಾ.ಪಂ. ಇಒ ಶೇಖರ ಕರಿಬಸಪ್ಪಗೋಳ, ‘ತಪ್ಪಿತಸ್ಥ ಅಧಿಕಾರಿ ವಿರುದ್ಧ ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಮಹಿಳೆಯರು ಪ್ರತಿಭಟನೆ ವಾಪಸ್ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು