ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಅನುದಾನ ಅನ್ಯಕಾರ್ಯಕ್ಕೆ ಬಳಸಬೇಡಿ: ದಸಂಸ

Published 22 ಫೆಬ್ರುವರಿ 2024, 4:13 IST
Last Updated 22 ಫೆಬ್ರುವರಿ 2024, 4:13 IST
ಅಕ್ಷರ ಗಾತ್ರ

ಚಿಕ್ಕೋಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪಟ್ಟಣದ ಬಸವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಬಾರದು. ಪರಿಶಿಷ್ಟರಿಗೆ ನೀಡಿದ ಜಮೀನನ್ನು ಪರಭಾರೆ ಮಾಡಬಾರದು. ದೌರ್ಜನ್ಯ ತಡೆಗೆ ಪ್ರತಿಯಾಗಿ ಪ್ರಕರಣ ದಾಖಲಿಸಬಾರದು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಉಪ ವಿಭಾಗಾಧಿಕಾರಿ ಮಹೆಬೂಬಿ ಅವರಿಗೆ ಸಲ್ಲಿಸಿದರು.

ಬಸವ ವೃತ್ತದ ಬಳಿಯಲ್ಲಿ ಕೆಲ ಕಾಲ ನಿಪ್ಪಾಣಿ– ಮುಧೋಳ ಹಾಗೂ ಸಂಕೇಶ್ವರ– ಜೇವರ್ಗಿ ರಾಜ್ಯ ಹೆದ್ದಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಮುತ್ತಣ್ಣ ರಾಯಣ್ಣವರ, ಕಲ್ಲಪ್ಪ ರಾಮಚನ್ನವರ, ರವಿ ಬಸ್ತವಾಡಕರ, ಸವಿತಾ ಅಸೋಧೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT