ಬುಧವಾರ, ಆಗಸ್ಟ್ 10, 2022
23 °C

ಪೌರಕಾರ್ಮಿಕರ ಪಾದಗಳಿಗೆ ಪೂಜಿಸಿ ರಾಹುಲ್‌ ಗಾಂಧಿ ಜನ್ಮದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ (ಬೆಳಗಾವಿ ಜಿಲ್ಲೆ): ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ಪುರಸಭೆ ಆವರಣದಲ್ಲಿ 50 ಪೌರಕಾರ್ಮಿಕರ ಪಾದ ಪೂಜಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜನ್ಮದಿನವನ್ನು ವಿನೂತನವಾಗಿ ಶನಿವಾರ ಆಚರಿಸಿದರು.

‘ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಂತೆ ನಿಜ ಶ್ರಮಜೀವಿಗಳಾದ ಪೌರಕಾರ್ಮಿಕರ ಪಾದ ಪೂಜೆ ಮಾಡುವುದು ನಿಜವಾದ ಪರಮಾತ್ಮನನ್ನು ಪೂಜಿಸಿದಂತೆಯೇ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಹೇಳಿದರು.

ಪೌರಕಾರ್ಮಿಕರಿಗೆ ಅಭಿನಂದನಾ ಪತ್ರವನ್ನೂ ನೀಡಲಾಯಿತು.

ಮುಖಂಡ ಗಜಾನನ ಮಂಗಸೂಳಿ, ‘ಕೋವಿಡ್ ಭೀತಿ ನಡುವೆಯೂ ಪೌರಕಾರ್ಮಿಕರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅವರ ಕಾರ್ಯ ಶ್ಲಾಘನೀಯ’ ಎಂದರು.

ಮುಖಂಡ ಸುನಿಲ ಸಂಕ, ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿದರು.

ಮುಖಂಡರಾದ ಅನಿಲ ಸುಣದೋಳಿ, ಧರೆಪ್ಪ ಠಕ್ಕಣ್ಣವರ, ಬಸವರಾಜ ಬುಟಾಳಿ, ರಾಬಸಾಬ ಐಹೊಳೆ, ಅಸ್ಲಂ ನಾಲಬಂದ, ರಾಜು ಜಮಖಂಡಿಕರ, ನಿಶಾಂತ ದಳವಾಯಿ, ಶ್ರೀಕಾಂತ ಪೂಜಾರಿ, ಗೌತಮ ಪರಾಂಜಪೆ, ವಿಲೀನರಾಜ ಯಳಮಲ್ಲೆ, ಕಪಿಲ ಘಟಕಾಂಬಳೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು