ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲದಲ್ಲಿ ಧಾರಾಕಾರ  ಮಳೆ: ಮನೆಗಳಿಗೆ ನುಗ್ಗಿದ ನೀರು

Last Updated 1 ಸೆಪ್ಟೆಂಬರ್ 2022, 3:03 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಬುಧವಾರ ತಡರಾತ್ರಿ ಧಾರಾಕಾರ ಮಳೆ ಸುರಿಯಿತು. ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿತು.

ವಾರ್ಡ್ ನಂ.8 ರಲ್ಲಿ ಭಾಗಶಃ ಮನೆ, ರಸ್ತೆಗಳು ಜಲಾವೃತಗೊಂಡವು.

ಮನೆಗಳಿಗೆ ನುಗ್ಗಿದ ಮಳೆ ನೀರಿನಿಂದಾಗಿ ನಾಗರಿಕರು ರಾತ್ರಿಯಿಡೀ ತೊಂದರೆಗೆ ಒಳಗಾದರು. ನೀರಿನಲ್ಲಿಯೇ ಕಾಲ ಕಳೆದರು. ಮನೆಗಳಿಗೆ ನುಗ್ಗಿದ ಮಳೆ ನೀರು ತಗೆದು ಹಾಕಲು ಹರಸಾಹಸ ಪಟ್ಟರು. ನೀರು ಎಷ್ಟು ತಗೆದು ಹಾಕಿದರು ಪದೇ, ಪದೇ ಗಲೀಜು ಸಮೇತ ಮನೆಗಳಿಗೆ ನುಗ್ಗಿ ಬಂದಿತು. ವಿಷಯ ತಿಳಿದು ವಾರ್ಡ್ ಸದಸ್ಯರು ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಗೃಹಪಯೋಗಿ ವಸ್ತುಗಳು, ಆಹಾರ ಸಾಮಗ್ರಿ, ಪಾತ್ರೆಗಳು ಮಳೆ ನೀರಲ್ಲಿ ತೇಲಿದವು. ರಾತ್ರಿಯಿಡೀ ಜನ ಜಾಗರಣೆ ಮಾಡಿದಂತಾಯಿತು.

ಅಲ್ಲಲ್ಲಿ ಮಳೆ: ಬೆಳಗಾವಿ ನಗರ, ತಾಲ್ಲೂಕು, ಸವದತ್ತಿ, ಯರಗಟ್ಟಿ, ರಾಯಬಾಗ, ರಾಮದುರ್ಗ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ ತಾಲ್ಲೂಕುಗಳಲ್ಲಿಯೂ ರಾತ್ರಿ ಎರಡು ತಾಸು ಉತ್ತಮ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT