ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಕನಮರಡಿಯಲ್ಲಿ ಉತ್ತಮ ಮಳೆ

Published 15 ಮೇ 2024, 14:28 IST
Last Updated 15 ಮೇ 2024, 14:28 IST
ಅಕ್ಷರ ಗಾತ್ರ

ಯಮಕನಮರಡಿ: ಯಮಕನಮರಡಿ ಸುತ್ತಲಿನ ದಡ್ಡಿ, ಉಳ್ಳಾಗಡ್ಡಿ-ಖಾನಾಪೂರ, ಹಂಚಿನಾಳ, ಮಣಗುತ್ತಿ, ನಾಗನೂರ ಕೆ.ಎಂ ಸೇರಿದಂತೆ  ಅನೇಕ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ  ಹಳ್ಳಕೊಳ್ಳಗಳು ತುಂಬಿ ಹರಿದು ರಸ್ತೆ ಮೇಲೆ ನೀರು ಹರಿದಿದ್ದು, ಸಂಚಾರಕ್ಕೆ ಅಡಚಣೆಯಾಯಿತು.

ಸಮೀಪದ ಹಿಡಕಲ್ ಡ್ಯಾಂನ ಡೈಕ್ ರಸ್ತೆ ಮಾರ್ಗದಲ್ಲಿ ಗಿಡಮರಗಳು ಉರುಳಿ ಬಿದ್ದಿವೆ.

ಸಿಡಿಲಿನ ಶಬ್ದಕ್ಕೆ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪೂರದಲ್ಲಿ ವೃದ್ದೆ ಅವ್ವಕ್ಕಾ ಈರಯ್ಯಾ ಮಠಪತಿ ಮೃತಪಟ್ಟಿದ್ದಾರೆ. ಹತ್ತರಗಿಯ ಹಳ್ಳಕ್ಕೆ ನಿರ್ಮಾಣ ಮಾಡುತ್ತಿದ್ದ ಸೇತುವೆ ಕುಸಿದಿದೆ. ಹಲವು ಗ್ರಾಮಗಳಲ್ಲಿ ಗಟಾರ ಇಲ್ಲದ ಕಾರಣ ಮನೆಗಳಲ್ಲಿ ಗಟಾರ ನೀರು ನುಗ್ಗಿದ್ದು, ಆ ನೀರು ಹೊರ ಹಾಕಲು ಮಹಿಳೆಯರು ಪರಿದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT