ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿಹೋದ ಹಳ್ಳದ ಸೇತುವೆ

Last Updated 30 ಸೆಪ್ಟೆಂಬರ್ 2022, 17:07 IST
ಅಕ್ಷರ ಗಾತ್ರ

ತೆಲಸಂಗ: ಗುರುವಾರ ರಾತ್ರಿ ಸುರಿದ ಮಳೆಯಂದಾಗಿ ತೆಲಸಂಗ ಗ್ರಾಮದ ಡೋಣಿ ಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಇದರಂದ ಜನರು ಜೀವ ಭಯದಲ್ಲೇ ಸಂಚರಿಸುವಂತಾಯಿತು.

ಹೊಲ ಗದ್ದೆಗಳಿಗೆ ಹೋದ ಮಹಿಳೆಯರು ಹಾಗೂ ಶಾಲೆ– ಕಾಲೇಜು ವಿದ್ಯಾರ್ಥಿಗಳನ್ನು ಹಗ್ಗದ ನೆರವಿನಿಂದ ಹಳ್ಳ ದಾಟಿಸಬೇಕಾಯಿತು. ಏಕಾಏಕಿ ಕೆರೆಯ ಸೇತುವೆ ಕೊಚ್ಚಿಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಧುಮ್ಮಿಕ್ಕಿತು. ರಾತ್ರಿಯವರೆಗೆ ಕಾದು ಕುಳಿತರೂ ನೀರು ಕಡಿಮೆಯಾಗಿಲಿಲ್ಲ. ಇದರಿಂದ ಗ್ರಾಮದ ಜನ ಹಗ್ಗದ ನೆರವಿನಿಂದ ಜನರನ್ನು ದಾಟಿಸಿದರು.

ಬಿಜ್ಜರಗಿ ರಸ್ತೆ ಹಾಗೂ ಹಳ್ಳದ ಸೇತುವೆಗಳ ನಿರ್ಮಾಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಬೀರಪ್ಪ ಕಡಗಂಚಿ, ಇಲ್ಲಿಯ ಸಮಸ್ಯೆಯ ಶಾಸ್ವತ ಪರಿಹಾರಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾತ್ಕಾಲಿಕವಾಗಿ ಜನ ಓಡಾಟಕ್ಕೆ ಬೇಕಿರುವ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT