ಸೋಮವಾರ, ಸೆಪ್ಟೆಂಬರ್ 26, 2022
24 °C

ಬೆಳಗಾವಿ: ಟಾಕಳೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯುವತಿ ಕಪ್ಪು ಬಟ್ಟೆ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ತೋಟಗಾರಿಕೆ ಇಲಾಖೆಯ ಖಾನಾಪುರ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ಪ್ರಕರಣ ದಾಖಲಿಸಿ 24 ದಿನ ಕಳೆದರೂ ಬಂಧಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕರ್ತವ್ಯ ಮರೆತಿದ್ದಾರೆ. ಇದನ್ನು ಖಂಡಿಸಿ ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು’ ಎಂದು ಪ್ರಕರಣ ದಾಖಲಿಸಿದ ಚನ್ನಪಟ್ಟಣ ಮೂಲದ ಯುವತಿ ತಿಳಿಸಿದರು.

‘ಅತ್ಯಾಚಾರ, ಗರ್ಭಪಾತ, ಹಲ್ಲೆ, ಖಾಸಗಿ ವಿಡಿಯೊ ಹರಿಬಿಟ್ಟಿದ್ದು ಸೇರಿದಂತೆ 12 ವಿವಿಧ ಕಲಂ ಅಡಿ ಕೇಸ್‌ ದಾಖಲಿಸಿದ್ದೇನೆ. ಈಗಾಗಲೇ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ತಕ್ಷಣಕ್ಕೆ ಬಂಧಿಸಬೇಕಾದ ಪೊಲೀಸರು ನೆಪ ಹೇಳುತ್ತಿದ್ದಾರೆ. ಇದನ್ನು ಖಂಡಿಸಿ ಬೆಳಗಾವಿಯ ಹಲವು ಮಹಿಳೆಯರೊಂದಿಗೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮೌನವಾಗಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು’ ಎಂದರು.

‘ಪ್ರತಿಭಟನಾರ್ಥವಾಗಿ ಒಂದು ಖಾಲಿ ಚೆಕ್‌ ಅನ್ನು ಸಚಿವ ಕಾರಜೋಳ ಅವರಿಗೆ ನೀಡುತ್ತೇನೆ. ಹಣ ಕೊಟ್ಟು ನ್ಯಾಯ ಪಡೆಯಬೇಕೇ ಎಂದು ಅವರೇ ತಿಳಿಸಬೇಕು. ಸ್ವಾತಂತ್ರ್ಯ ಸಮಾರಂಭಕ್ಕೆ ಅಡ್ಡಿಪಡಿಸುವುದು ನನ್ನ ಉದ್ದೇಶವಲ್ಲ. ಆದರೆ, ನ್ಯಾಯವನ್ನು ಎಲ್ಲಿಯಾದರೂ ಕೇಳಬಹುದು. ಆರೋಪಿಯನ್ನು ಜೈಲಿಗಟ್ಟುವವರೆಗೆ ನಾನು ಸುಮ್ಮನಿರುವುದಿಲ್ಲ’ ಎಂದೂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು