ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮದುರ್ಗ ಪುರಸಭೆಗೆ ₹15.56 ಲಕ್ಷ ಉಳಿತಾಯ ಬಜೆಟ್‌

Published 26 ಫೆಬ್ರುವರಿ 2024, 13:26 IST
Last Updated 26 ಫೆಬ್ರುವರಿ 2024, 13:26 IST
ಅಕ್ಷರ ಗಾತ್ರ

ರಾಮದುರ್ಗ: ಪ್ರಸಕ್ತ ಸಾಲಿನ ರಾಮದುರ್ಗ ಪುರಸಭೆಯ ₹15.56 ಲಕ್ಷ ಉಳಿತಾಯ ಬಜೆಟ್‍ಗೆ ಪುರಸಭೆಯ ಆಡಳಿತಾಧಿಕಾರಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ಈರಣ್ಣ ಗುಡದಾರಿ ತಿಳಿಸಿದ್ದಾರೆ.

₹4.20 ಕೋಟಿ ಆದಾಯವನ್ನು ಪುರಸಭೆಯ ಕರ ದರಗಳು ಸೇರಿ ವಿವಿಧ ಮೂಲಗಳಿಂದ ನಿರೀಕ್ಷಿಸಲಾಗಿದೆ. ₹13.45 ಕೋಟಿ ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಸ್‍ಎಫ್‍ಸಿ, ಮುಕ್ತನಿಧಿ, ಎಸ್‍ಎಫ್‍ಸಿ ವಿಶೇಷ ಅನುದಾನ ಮತ್ತು 15ನೇ ಹಣಕಾಸು ಯೋಜನೆಯಿಂದ ನಿರೀಕ್ಷಿಸಲಾಗಿದೆ. ವಿಶೇಷ ಅನುದಾನಿತ ಖಾತೆಗಳಿಂದ ಆದಾಯ ಮತ್ತು ಅಸಾಧಾರಣ (ಜಿಎಸ್‍ಟಿ, ಆದಾಯ ತೆರಿಗೆ ಇತರೆ) ಮೂಲಗಳಿಂದ ನಿರೀಕ್ಷಿಸಿ ಒಟ್ಟು ₹20.37 ಕೋಟಿ ಆದಾಯವನ್ನು ನಿರೀಕ್ಷಿಸಿ ಬಜೆಟ್ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಟ್ಟಣದಲ್ಲಿ ರಸ್ತೆ ನಿರ್ಮಾಣ ಮತ್ತು ದುರಸ್ತಿಗೆ ₹180 ಲಕ್ಷ, ರಸ್ತೆಬದಿ ಚರಂಡಿ ನಿರ್ಮಾಣ, ಗಟಾರ್‌ಗಳ ಮೇಲೆ ಸ್ಲ್ಯಾಬ್‌ ಅಳವಡಿಸುವುದು, ಸಿ.ಡಿ ನಿರ್ಮಾಣ, ಒಳಚರಂಡಿ ಕಾಮಗಾರಿಗೆ ₹74 ಲಕ್ಷ, ಕುಡಿಯುವ ನೀರು ಪೂರೈಕೆ ವಿತರಣಾ ವ್ಯವಸ್ಥೆಗೆ ₹123.60 ಲಕ್ಷ, ಘನತ್ಯಾಜ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದ ಕಾಮಗಾರಿಗೆ ₹75 ಲಕ್ಷ, ಬೀದಿದೀಪಗಳ ಜೋಡಣೆಗಾಗಿ ₹59.60 ಲಕ್ಷ, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ₹20 ಲಕ್ಷ, ಉದ್ಯಾನ ಅಭಿವೃದ್ಧಿಗೆ ₹15 ಲಕ್ಷ, ಬೀದಿದೀಪಗಳ ನಿರ್ವಹಣೆಗೆ ₹24 ಲಕ್ಷ, ಹೊರಗುತ್ತಿಗೆ ವಾಹನ ಚಾಲಕರ ವೇತನಕ್ಕೆ ₹44.40 ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ಕಾರ್ಮಿಕರ ವೇತನ ₹28.90 ಲಕ್ಷ, ಬೀದಿದೀಪಗಳ ಹಾಗೂ ನೀರು ಸರಬರಾಜು ಮಾಡಲು ವಿದ್ಯುತ್ ಬಳಕೆ ವೆಚ್ಚ ₹325 ಲಕ್ಷ, ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ₹70 ಲಕ್ಷ, ಎಸ್‍ಡಬ್ಲುಎಂ ಯೋಜನೆಯ ವಾಹನ ಖರೀದಿಗೆ ₹50 ಲಕ್ಷ, ನೀರು ಪೂರೈಕೆಗೆ ₹15 ಲಕ್ಷ, ಯಂತ್ರೋಪಕರಣ ಖರೀದಿಗೆ ₹31.60 ಲಕ್ಷ, ಜಾಹೀರಾತು ವೆಚ್ಚಕ್ಕೆ ₹10 ಲಕ್ಷ, ಪುರಸಭೆಯ ವಾಹನಗಳ ಇಂಧನಕ್ಕೆ ₹18 ಲಕ್ಷ, ಪುರಸಭೆ ಸಿಬ್ಬಂದಿ ವೇತನಕ್ಕೆ ₹256 ಲಕ್ಷ ಹಾಗೂ ಪರಿಶಿಷ್ಠ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಂಗವಿಕಲರ ಅಭಿವೃದ್ಧಿಗೆ ₹37.17 ಲಕ್ಷ ಅನುದಾನ ವೆಚ್ಚ ಮಾಡಲು ಆಡಳಿತಾಧಿಕಾರಿಗಳು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT