ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗಾಗಿ ಹೋರಾಟಕ್ಕೆ ಸಿದ್ದ: ಶಾಸಕ ರಾಜು ಕಾಗೆ

Published : 11 ಆಗಸ್ಟ್ 2024, 15:49 IST
Last Updated : 11 ಆಗಸ್ಟ್ 2024, 15:49 IST
ಫಾಲೋ ಮಾಡಿ
Comments

ಕಾಗವಾಡ: ಸರ್ಕಾರ ಈ ಭಾಗ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ವಿಳಂಬ ಮಾಡಿದಲ್ಲಿ ನಾನು ಸಹ ಸ್ಥಳೀಯ ರೈತರ ಜೊತೆ ಹೋರಾಟಕ್ಕೆ ಸಿದ್ದ ಇದ್ದೆನೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು.

 ಉಗಾರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ಬಸವೇಶ್ವರ ಏತ ನೀರಾವರಿ ಕುರಿತು ಸಿಎಂ ಜೊತೆ ಸಮಗ್ರ ಚರ್ಚೆ ಮಾಡಿದ್ದು, ಪೂರ್ಣಪ್ರಮಾಣದ ಕಾಮಗಾರಿಯಲ್ಲಿ ಸರ್ಕಾರದ ಲೋಪದೋಷಗಳಿಲ್ಲ.  ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗಿದ್ದು, ರೈತರ ಒಳಿತಿಗಾಗಿ ರೈತರ ಜೊತೆಗೆ ಸರ್ಕಾರದ ವಿರುದ್ಧವೂ  ಹೋರಾಟ ಮಾಡಲು ಸಿದ್ಧನಾಗಿದ್ದೇನೆ’ ಎಂದರು. 

‘ಈಗಾಗಲೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು, ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಇದೆ ಈ ಕುರಿತು ಸರ್ಕಾರಕ್ಕೆ ಸೂಕ್ತ ಪರಿಹಾರ ಹಾಗೂ ಬಸವೇಶ್ವರ ಎತ ನೀರಾವರಿ ವಿಳಂಬವಾಗದಂತೆ ಮನವರಿಕೆ ಮಾಡಿದ್ದೇನೆ. ಒಂದು ವೇಳೆ ಆಗಸ್ಟ್ 30ರ ಒಳಗಾಗಿ ನೀರು ಬಿಡದಿದ್ದರೆ ರೈತರು ಹೋರಾಟಕ್ಕೆ ನಿಂತರೆ ನಾನು ರೈತರ ಜೊತೆಗೂಡಿ  ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ದನಾಗಿದ್ದೇನೆ‘ ಎಂದು ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು.

ಏಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಬಸವೇಶ್ವರ ಏತ ನೀರಾವರಿ ವಿಳಂಬಕ್ಕೆ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ನಿಂತಲ್ಲೆ ನಿಂತು ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಇತ್ತ ಕಳೆದ ಏಳು ವರ್ಷಗಳಿಂದ ಭೂಮಿಯು ಇಲ್ಲ ನೀರು ಇಲ್ಲದಂತಾಗಿದೆ. ಈ ಭಾಗದ ರೈತರ ಬದುಕು, ಜುಲೈ 15 ಕ್ಕೆ ನೀರು ಬಿಡುವ ಸ್ಥಳೀಯ ಶಾಸಕರ ಹೇಳಿಕೆ ಹುಸಿಯಾಗಿದ್ದಕ್ಕೆ ಯೋಜನೆಗೆ ಭೂಮಿ ನೀಡಿದ ರೈತರು ಬೇಸರವಾಗಿದ್ದಾರೆ. ಈಗ ಬಹುದಿನಗಳ ಬೇಡಿಕೆಗೆ ಪಟ್ಟು ಹಿಡಿದ ಉಪವಾಸ ಸತ್ಯಾಗ್ರಹಕ್ಕೆ ಸಜ್ಜಾಗಿದ್ದಾರೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT