ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳ ಬಳಸುವಂತಿಲ್ಲ: ಪ್ರಭಾವತಿ ಎಫ್‌.

ಚುನಾವಣಾಧಿಕಾರಿ ಪ್ರಭಾವತಿ ಎಫ್‌. ಹೇಳಿಕೆ
Published 18 ಮಾರ್ಚ್ 2024, 16:05 IST
Last Updated 18 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ಮೂಡಲಗಿ: ‘ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾಗಿದ್ದು ರಾಜಕೀಯ ಪಕ್ಷಗಳು ನಿಯಮಾವಳಿಗಳನ್ನು ಪಾಲಿಸಬೇಕು’ ಎಂದು ಅರಭಾವಿ ಮತಕ್ಷೇತ್ರ ಚುನಾವಣಾಧಿಕಾರಿ ಮತ್ತು ಬೈಲಹೊಂಗಲ ಉಪವಿಭಾಗಾಧಿಕಾರಿಯೂ ಆಗಿರುವ ಪ್ರಭಾವತಿ ಎಫ್‌. ಹೇಳಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸೋಮವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಪರಿಗಣಿಸುವ ಮತದಾರರ ಪಟ್ಟಿ ಸಿದ್ದವಾಗಿದ್ದು, ಅವನ್ನು ಪರಿಶೀಲಿಸಲು ಅವಕಾಶವಿದೆ ಎಂದರು.

ಚುನಾವಣಾ ಪ್ರಚಾರಕ್ಕೆ ದೇವಸ್ಥಾನ, ಮಠ, ಮಸೀದಿ, ಚರ್ಚ್‌ಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಬಳಸುವಂತಿಲ್ಲ. ಯಾವುದೇ ಕಾರ್ಯಕ್ರಮ ಮಾಡುವ ಪೂರ್ವದಲ್ಲಿ 2 ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಸರಿಯಾದ ಮಾಹಿತಿಗಳನ್ನು ನೀಡಬೇಕು ಮತ್ತು ನೀಡಿದ ಮಾಹಿತಿಯಂತೆ ನಡೆದುಕೊಳ್ಳಬೇಕು ಎಂದರು.

ತಹಶೀಲ್ದಾರ್‌ ಬಿ.ಎಸ್.ಕಡಕಬಾವಿ ಮಾತನಾಡಿ, ‘ಲೋಕಸಭಾ ಚುನಾವಣೆಯ ಅರಭಾವಿ ಮತಕ್ಷೇತ್ರದಿಂದ 2,56,159 ಮತದಾರರು ಇದ್ದು, ಅದರಲ್ಲಿ 1,28,076 ಪುರುಷರು ಮತ್ತು 1,28,074 ಮಹಿಳೆಯರು ಮತ್ತು ಇತರೆ 9 ಮತದಾರು ಇದ್ದಾರೆ. 80 ವಯಸ್ಸು ಮೇಲ್ಪಟ್ಟ ಮತರದಾರರು 5791, ಯುವ ಮತದಾರರು 7607 ಮತದಾರರು ಇದ್ದಾರೆ. 22 ಮಂದಿ ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನವೀನಕುಮಾರ, ಸಿಪಿಐ ಅಬ್ದುಲ್‌ ವಾಜೀದ ಪಟೇಲ ಮತ್ತು ಸಹಾಯಕ ಚುನಾವಣಾ ವೆಚ್ಚ ವೀಕ್ಷಕ ಪಿ.ಕೆ. ಚಿಂಚಲಿ ಅವರು ಮಾತನಾಡಿದರು. ಉಪತಹಶೀಲ್ದಾರ್ ಪರುಶರಾಮ ನಾಯಿಕ, ಪಿಎಸ್‌ಐ ಚಂದ್ರಶೇಖರ ಹೆರಕಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT