ಮಂಗಳವಾರ, ಆಗಸ್ಟ್ 3, 2021
28 °C

ತಲ್ಲೂರ: ರುದ್ರಭೂಮಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಲ್ಲೂರ (ಬೆಳಗಾವಿ ಜಿಲ್ಲೆ): ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಇತರ ಹಿಂದುಳಿದ ವರ್ಗಗಳ ನಾಗರಿಕರು ರುದ್ರಭೂಮಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ.ಬಿ. ಅಮ್ಮಿನಬಾವಿ ಅವರಿಗೆ ಮನವಿ ಸಲ್ಲಿಸಿದರು.

‘ಪ್ರಸ್ತುತ ಶವಸಂಸ್ಕಾರಕ್ಕಾಗಿ ಖಾಲಿ ಜಾಗ, ಗುಡ್ಡ ಅಥವಾ ಬಯಲನ್ನು ಅವಲಂಬಿಸಿದ್ದೇವೆ. ಇದರಿಂದ ಬಹಳ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

ಅಶೋಕ ವನ್ನೂರ, ಈರಪ್ಪ ಚಿಕಾಕಿ, ಡಿ.ಡಿ. ಭೋವಿ, ಲೋಕನಾಥ ಪೂಜೇರ, ಅಡಿವೆಪ್ಪ ಮಾದರ, ಬಸವರಾಜ ಪೂಜೇರ, ಬಸವರಾಜ ಕೊಟ್ರೆನ್ನವರ, ಪಕ್ಕೀರಪ್ಪ ಉಪ್ಪಾರ, ಯಮನಪ್ಪ ತಳವಾರ, ದೇಮಪ್ಪ ಮುಕ್ಕಾನಿ, ದುಂಡಪ್ಪ ಮಾಳಗಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು