ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನದಲ್ಲಿ ರೋಶ್ನಿಗೆ 2ನೇ ರ್ಯಾಂಕ್

ಬೆಳಗಾವಿ: ಇಲ್ಲಿನ ಡಿವೈನ್ ಪ್ರಾವಿಡೆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಶ್ನಿ ತೇಜಸ್ವಿ ತೀರ್ಥಹಳ್ಳಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ಮತ್ತೆರಡು ಅಂಕಗಳನ್ನು ಪಡೆದಿದ್ದಾರೆ. 625ಕ್ಕೆ 624 ಅಂಕ ಗಳಿಸುವುದರೊಂದಿಗೆ ರಾಜ್ಯದ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಅವರಿಗೆ 2 ಅಂಕಗಳು ಕಡಿಮೆ ಬಂದಿದ್ದವು.
ಕನ್ನಡ ಹಾಗೂ ವಿಜ್ಞಾನ ವಿಷಯದಲ್ಲಿ ಹೆಚ್ಚುವರಿಯಾಗಿ ತಲಾ 1 ಅಂಕ ಪಡೆದಿದ್ದಾರೆ.
ಇವರು ವೈದ್ಯ ದಂಪತಿ ಡಾ.ಟಿ.ಎಸ್. ತೇಜಸ್ವಿ– ಡಾ.ರಾಜಿ ಪುತ್ರಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.