ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ನ ಬುಕ್‌ ಹೌಸ್‌ ಬೆಳಗಾವಿಯಲ್ಲೂ ಆರಂಭ

Last Updated 10 ಡಿಸೆಂಬರ್ 2019, 10:11 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ಅತಿದೊಡ್ಡ ಪುಸ್ತಕ ಮಳಿಗೆಯಾದ ಸಪ್ನ ಬುಕ್‌ ಹೌಸ್‌ ತನ್ನ 19ನೇ ಶಾಖೆಯನ್ನು ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದ ಬಳಿ ಇದೇ 12ರಂದು ತೆರೆಯಲಿದೆ.

‘ಅಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಉದ್ಘಾಟಿಸಲಿದ್ದಾರೆ. ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಆರ್‌ಸಿಯು ಪ್ರೊ.ಎಂ.ರಾಮಚಂದ್ರಗೌಡ ಭಾಗವಹಿಸಲಿದ್ದಾರೆ’ ಎಂದು ಸಪ್ನ ಬುಕ್‌ ಹೌಸ್‌ನ ಬೆಂಗಳೂರಿನ ವ್ಯವಸ್ಥಾಪಕ ದೊಡ್ಡೇಗೌಡರ ತಿಳಿಸಿದರು.

‘ಬುಕ್‌ ಹೌಸ್‌ ಅಧ್ಯಕ್ಷ ಸುರೇಶ್‌ ಶಾ ಹಾಗೂ ಪತ್ನಿ ಬಾನುಮತಿ 1967ರಲ್ಲಿ ಬೆಂಗಳೂರಿನಲ್ಲಿ ಮೊದಲ ಮಳಿಗೆ ಆರಂಭಿಸಿದರು. ಲೇಖಕರು ಹಾಗೂ ಓದುಗರ ಪ್ರೋತ್ಸಾಹದಿಂದ ಹಂತಹಂತವಾಗಿ ವಿವಿಧ ನಗರಗಳಲ್ಲಿ ಶಾಖೆಗಳನ್ನು ತೆರೆದರು. ಇದುವರೆಗೆ 18 ಶಾಖೆಗಳನ್ನು ತೆರೆಯಲಾಗಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ಸೇರಿದಂತೆ ಸುಮಾರು 5 ಲಕ್ಷ ಪುಸ್ತಕಗಳು ಲಭ್ಯ ಇವೆ. ಇದಲ್ಲದೇ, 6 ಸಾವಿರ ಪುಸ್ತಕಗಳನ್ನು ಪ್ರಕಟಿಸಿದೆ. ಈಗ ಆನ್‌ಲೈನ್‌ನಲ್ಲೂ ನಮ್ಮ ಪುಸ್ತಕಗಳು ಲಭ್ಯವಿವೆ. ಪ್ರತಿದಿನ ಸರಾಸರಿಯಾಗಿ 600 ಕನ್ನಡ ಪುಸ್ತಕಗಳಿಗೆ ಆನ್‌ಲೈನ್‌ನಲ್ಲಿ ಬೇಡಿಕೆ ಬರುತ್ತಿದೆ’ ಎಂದರು.

‘ಪುಸ್ತಕಗಳ ಜೊತೆ ಓದಿಗೆ ಪೂರಕವಾದ ವಸ್ತುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ. ಸ್ಟೇಷನರಿ, ಮಕ್ಕಳ ಆಟಿಕೆಗಳೂ ಇಲ್ಲಿ ಲಭ್ಯ ಇವೆ. ಸುಮಾರು 11,000 ಚದರ ಅಡಿ ಸುತ್ತಳತೆಯ ಮೂರು ಅಂತಸ್ತಿನ ವಿಶಾಲ ಕಟ್ಟಡದಲ್ಲಿ ಶಾಖೆ ತೆರೆಯಲಾಗಿದೆ. ನಗರದಲ್ಲಿ 2 ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳು, ಪದವಿ ಕಾಲೇಜುಗಳು ಸೇರಿದಂತೆ ಹಲವು ಶೈಕ್ಷಣಿಕ ಕೇಂದ್ರಗಳಿವೆ. ಈ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಹೇಳಿದರು.

ಬೆಳಗಾವಿ ಶಾಖೆಯ ವ್ಯವಸ್ಥಾಪಕ ರಘು, ಬೆಂಗಳೂರು ಶಾಖೆಯ ಶ್ರೀನಿವಾಸ, ಸ್ಥಳೀಯರಾದ ಪ್ರಕಾಶ ದೇಶಪಾಂಡೆ ಹಾಗೂ ಕನ್ನಡ ಸಾಹಿತ್ಯ ಭವನದ ಗೌರವ ಕಾರ್ಯದರ್ಶಿ ಕಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT