ಮೂಡಲಗಿ: ‘ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಕಠಿಣ ಪರೀಕ್ಷೆಗಳನ್ನು ಎದುರಿಸಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಇಲ್ಲಿಯ ಶ್ರೀಪಾದಬೋಧ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೊರಿಯಲ್ ಟ್ರಸ್ಟ್ನ ಜ್ಞಾನ ಸಾಧನಾ ಸ್ವ–ಅಧ್ಯಯನ ಕೇಂದ್ರದಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮೂಡಲಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಯುಪಿಎಸ್ಸಿ, ಕೆಪಿಎಸ್ಸಿ ಹಾಗೂ ಇತರೆ ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲ ಸಮರ್ಥರಾಗಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಂಥಾಲಯ ತೆರೆದು ಉಚಿತವಾಗಿ ಸೇವೆ ನೀಡುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿ ಶ್ರೀಶೈಲ ಗುಡುಮೆ ಮಾತನಾಡಿ, ಯೋಜನಾಬದ್ಧ ಜೀವನ, ನಿರಂತರ ಓದಿನ ಮೂಲಕ ಯಶಸ್ವಿಯಾಗಲು ಸಾಧ್ಯ. ವಿದ್ಯಾರ್ಥಿಗಳು ಸಾಧನೆಯ ಅವಧಿಯನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದರು.

ಪ್ರಾಚಾರ್ಯರಾದ ಮಹೇಶ ಕಂಬಾರ, ಮುಖ್ಯ ಅತಿಥಿ ಪಾಂಚಜನ್ಯ ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿ ಬೆಳಗಾವಿಯ ಮುಖ್ಯಸ್ಥ ಪ್ರವೀಣ ಮಗದುಮ ಮಾತಾಡಿದರು.

ಜ್ಞಾನಸಾಧನಾ ಅಧ್ಯಯನ ಕೇಂದ್ರದ ಮೇಲ್ವಿಚಾರಕ ವಸಂತ ನಾಯಿಕವಾಡಿ ಪ್ರಾಸ್ತಾವಿಕ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಮುಖಂಡರಾದ ಸಂತೋಷ್ ಸೋನವಾಲಕರ, ಅನ್ವರ್ ನದಾಫ್, ಹನಮಂತ ಗುಡ್ಲಮನಿ, ಪಾಂಡುರಂಗ ಮಹೇಂದ್ರಕರ, ಕೇದಾರಿ ಭಸ್ಮೆ, ಸಿದ್ದಣ್ಣಾ ದುರದುಂಡಿ, ರವೀಂದ್ರ ಸಣ್ಣಕ್ಕಿ, ಹುಸೇನ್ ಶೇಖ, ಬಸು ಝಂಡೇಕುರುಬರ ಸೇರಿದಂತೆ ಅನೇಕ ಪರೀಕ್ಷಾರ್ಥಿಗಳು ಉಪಸ್ಥಿತರಿದ್ದರು. ಜಯಶ್ರೀ ಮದಿಹಳ್ಳಿ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.