ಅಥಣಿ (ಬೆಳಗಾವಿ ಜಿಲ್ಲೆ): ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಅವರ ಮೇಲೆ ಶಾಸಕ ಲಕ್ಷ್ಮಣ ಸವದಿ ಅವರ ಮನೆ ಆವರಣದಲ್ಲಿ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಬ್ಯಾಂಕ್ನ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾನು ಮತ್ತು ಸಹೋದ್ಯೋಗಿ ಬಸವರಾಜ ಕಮತಗಿ ಸೇರಿ ಕೆಲವರು ಲಕ್ಷ್ಮಣ ಸವದಿ ಅವರ ಮನೆಗೆ ಹೋಗಿದ್ದೆವು. ಆಗ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಅವರು ಬಸವರಾಜ ಅವರನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿದರು. ನಾನು ಇದಕ್ಕೆ ಆಕ್ಷೇಪಿಸಿದೆ. ಆಗ ಲಕ್ಷ್ಮಣ ಸವದಿ, ಚಿದಾನಂದ ಸವದಿ ಮತ್ತು 15ಕ್ಕೂ ಹೆಚ್ಚು ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದರು. ನನ್ನೊಂದಿಗೆ ಇದ್ದ ನಾಲ್ವರಿಗೂ ಸಣ್ಣಪುಟ್ಟ ಗಾಯವಾಗಿವೆ’ ಎಂದು ನಿಂಗಪ್ಪ ಕರೆಣ್ಣವರ ಆರೋಪಿಸಿದರು.

‘ಡಿಸಿಸಿ ಬ್ಯಾಂಕ್ನ ನೌಕರರಾದ ಸವದಿ ಸಂಬಂಧಿ ಶಂಕರ ನಂದೇಶ್ವರ ಅವರ ವರ್ಗಾವಣೆ ಅಥಣಿ ಶಾಖೆಯಿಂದ ಬೆಳಗಾವಿ ಶಾಖೆಗೆ ಆಗಿದೆ. ನಾನೇ ಅದನ್ನು ಮಾಡಿಸಿದ್ದೇನೆ ಎಂಬ ಕೋಪ ಅವರಲ್ಲಿತ್ತು. ಜತೆಗೆ, ಜಾರಕಿಹೊಳಿ ಕುಟುಂಬದೊಂದಿಗೆ ನನಗೆ ಉತ್ತಮ ಸಂಬಂಧವಿದೆ. ಅದಕ್ಕೆ ನನ್ನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಶಂಕೆ ಇದೆ. ನನ್ನ ಜೀವಕ್ಕೆ ಹಾನಿಯಾದರೆ, ಲಕ್ಷ್ಮಣ ಸವದಿ ಅವರೇ ಹೊಣೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.

ಜಿಲ್ಲೆಯ ವಿವಿಧೆಡೆ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಬಂದ್ ಮಾಡಿದ ನೌಕರರು, ‘ನಿಂಗಪ್ಪ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ, ಬ್ಯಾಂಕ್ ಬಂದ್ ಮಾಡಿ, ಹಲ್ಲೆ ಮಾಡಿದ ಆರೋಪಿಗಳ ಮನೆ ಮುಂದೆ ಧರಣಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಹಲ್ಲೆಗೂ ನಮಗೂ ಸಂಬಂಧವಿಲ್ಲ: ಸವದಿ

‘ಬಿಡಿಸಿಸಿ ನೌಕರರ ಸಂಘದಲ್ಲಿ ಸಮಸ್ಯೆಗಳಿದ್ದು ಅದರ ಚರ್ಚೆಗಾಗಿ ಕೆಲವರು ಮನೆಗೆ ಬಂದಿದ್ದರು. ಸಂಘದ ಅಧ್ಯಕ್ಷ ನಿಂಗಪ್ಪ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ನೌಕರರು ದೂರಿದರು. ಆಗ ಈ ವಿಷಯ ನೀವೇ ಹೊರಗೆ ಬಗೆಹರಿಸಿಕೊಳ್ಳಿ ಎಂದೆ. ಅವರು ಹೊರ ಹೋದಂತೆ ನನ್ನ ಬೆಂಬಲಿಗ ಶ್ರೀಕಾಂತ ಅಲಗೂರ ಶಾಸಕರ ಬಳಿ ಏಕೆ ಈ ವಿಷಯ ತಂದಿದ್ದೀರಿ ಎಂದು ಪ್ರಶ್ನಿಸಿದರು. ಆಗ ನಿಂಗಪ್ಪ ಅವಾಚ್ಯವಾಗಿ ಶ್ರೀಕಾಂತ ಅವರನ್ನು ನಿಂದಿಸಿ ಜಾತಿನಿಂದನೆ ಮಾಡಿದಾಗ ತಳ್ಳಾಟ ನೂಕಾಟವಾಗಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು. ‘ಜಗಳ ಮಾಡುವುದಾದರೆ ನಮ್ಮ ಮನೆಯಿಂದ ಹೊರನಡೆಯಿರಿ ಎಂದು ನಾನು ಹೇಳಿದೆ. ಈ ಹಲ್ಲೆಗೂ ನಮಗೂ ಸಂಬಂಧವಿಲ್ಲ. ಯಾರೋ ರಾಜಕೀಯ ಮುಖಂಡರು ಮಾಡಿಸಿದ ಗಲಾಟೆ ಇದು. ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ. ಇದರ ಹಿಂದೆ ಒಂದು ಸಂಚು ರೂಪಿಸಲಾಗಿದೆ. ತನಿಖೆ ನಂತರ ಎಲ್ಲವೂ ಹೊರಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.