ಮಂಗಳವಾರ, ಏಪ್ರಿಲ್ 20, 2021
31 °C

‘ಸೋಲು–ಗೆಲುವು ಸಮಾನಾಗಿ ಸ್ವೀಕರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡಬಿ: ‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಯಂತಹ ಆರೋಗ್ಯಕರವಾದ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು’ ಎಂದು ಯರಝರ್ವಿ ಸಮೂಹ ಸಂಪನ್ಮೂಲ ವ್ಯಕ್ತಿ ಎ.ಕೆ. ಮುಳ್ಳೂರ ಸಲಹೆ ನೀಡಿದರು.

ಸಮೀಪದ ಬೊಳಕಡಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 2019–20ನೇ ಸಾಲಿನ ಯರಝರ್ವಿ ಕೇಂದ್ರ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದರು.

ಗ್ರಾಮ ಪ‍ಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಹಮ್ಮನವರ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ನಿಂಗಮ್ಮ ನಡುವಿನ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಸ್. ತಳವಾರ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ ಮುಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಸೋಮನಟ್ಟಿ, ಅಜ್ಜಪ್ಪ ಹರಿಜನ, ಎಸ್‌ಡಿಎಂಸಿ ಸದಸ್ಯರು, ಸಿದ್ದಪ್ಪ ತುಬಾಕಿ, ಲಕ್ಷ್ಮಿ ದೇವರಮನಿ, ವಿಠ್ಠಲ ಸರ್ವಿ, ವಿಠ್ಠಲ ಚುಂಚನೂರ, ಮುಖ್ಯಶಿಕ್ಷಕ ಎಂ.ಐ. ಬೂಗುರ ಇದ್ದರು.

ಎಸ್‌.ಎಸ್. ಜಕಾತಿ ಸ್ವಾಗತಿಸಿದರು. ಸಿ.ಎಸ್. ಹಿರೇಮಠ ನಿರೂಪಿಸಿದರು. ಬಿ.ವಿ. ಪರ್ವತಗೌಡ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.