ನಾಗರಮುನ್ನೋಳಿ: ಸಿದ್ದೇಶ್ವರ ಜಾತ್ರಾ ಸಂಭ್ರಮ

ನಾಗರಮುನ್ನೋಳಿ: ಗ್ರಾಮದಲ್ಲಿ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ನಾಲ್ಕು ದಿನಗಳವರೆಗೆ ಸರಳವಾಗಿ ನಡೆಸಲಾಯಿತು.
ಮಂಗಳವಾರ ಗ್ರಾಮದಲ್ಲಿ ಬ್ರಹ್ಮದೇವರ ಹಬ್ಬ ಆಚರಿಸಲಾಯಿತು. ಮನೆ ಮನೆಗಳಿಂದ ದೇವರಿಗೆ ನೈವೇದ್ಯ ತಂದು ಸಮರ್ಪಿಸಲಾಯಿತು. ಬುಧವಾರ ನರಕ ಚತುರ್ದಶಿಯಂದು ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು.
ಗುರುವಾರ ಅಮವ್ಯಾಸೆ ಅಂಗವಾಗಿ ಸಿದ್ರಾಯಿ ದೇವರನ್ನು ಜಾಗನೂರ ಗ್ರಾಮದಲ್ಲಿನ ಹನುಮಾನ ಜಾತ್ರಾ ಮಹೋತ್ಸವಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಅಂದೇ ರಾತ್ರಿ ದೇವರ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ವಾಪಸ್ ತರಲಾಯಿತು. ರಾತ್ರಿ ಮನೆಗಳಲ್ಲಿ ಲಕ್ಷ್ಮಿ ಪೂಜೆ ಮಾಡಲಾಯಿತು.
ಶುಕ್ರವಾರ ಬಲಿಪಾಡ್ಯಮಿ ಅಂಗವಾಗಿ ಭಕ್ತರು ದೀಡ್‌ನಮಸ್ಕಾರ ಹಾಕಿ ದೇವರಿಗೆ ಹರಕೆ ತೀರಿಸಿದರು. ಮಧ್ಯಾಹ್ನ ಕಬ್ಬೂರ ಸಿದ್ರಾಯಿ ದೇವರ ಪಲ್ಲಕ್ಕಿ ಹಾಗೂ ನಾಗರಮುನ್ನೋಳಿ ಸಿದ್ರಾಯಿ ದೇವರ ಪಲ್ಲಕ್ಕಿ ಭೇಟಿ ಕಾರ್ಯಕ್ರಮವಿತ್ತು. ಭಕ್ತರಿಂದ ಡೋಲು ಬಾರಿಸಿ, ಭಂಡಾರ, ಕಾಯಿ ಹಾರಿಸಿ ಭಕ್ತಿ ಸಮರ್ಪಿಸಿದರು.
ಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ, ಡಾ.ಎಂ.ಬಿ. ಕುಂಬಾರ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಗ್ರಾ.ಪಂ. ಅಧ್ಯಕ್ಷ ಮಲ್ಲಪ್ಪ ಟೋಣಪೆ, ಬೆಮುಲ್ ನಿರ್ದೇಶಕ ವಿ.ಬಿ. ಈಟಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ನೇರ್ಲಿ, ಡಿ.ಬಿ. ಕೊಟಬಾಗಿ, ಶಿವಪುತ್ರ ಮನಗೂಳಿ, ಎಂ.ಎಸ್. ಈಟಿ, ವಿನಾಯಕ ಕುಂಬಾರ, ರಾಜು ಕುಂಬಾರ, ಮಾರುತಿ ಮರ‍್ಯಾಯಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.