ಬೈಲಹೊಂಗಲ: 'ಅಖಂಡ ಭಾರತವನ್ನು ಬರಿ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ ಸಿದ್ಧಾರೂಢರ ಗುರು ಪರಂಪರೆಗೆ ಐತಿಹಾಸಿಕ ಹಿನ್ನಲೆ ಇದೆ. ಆ ಮಹಾ ಮಹೀಮರು ಹಾಕಿಕೊಟ್ಟ ಭಕ್ತಿ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆದು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು' ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ ಶ್ರೀನಗರದಲ್ಲಿರುವ ಸದ್ಗುರು ಶ್ರೀಗುರು ಸಿದ್ದಾರೂಢ ಮಠದ ಮೂರನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಅಧ್ಯಾತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

'ಭಾರತೀಯ ಸನಾತನ ಧರ್ಮದ ಎಲ್ಲ ಆಚರಣೆ, ಪರಂಪರೆ, ಪದ್ಧತಿಗಳಿಗೆ ಅದರದೆ ಆದ ಮಹತ್ವವಿದೆ. ಜಾತ್ರೆ, ಉತ್ಸವಗಳು, ಧಾರ್ಮಿಕ ಆಚರಣೆಗಳಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಂಡು ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯಬೇಕು. ಮಕ್ಕಳಿಗೂ ಸಂಸ್ಕಾರದ ಶಿಕ್ಷಣ ನೀಡಿ ಸುಂಸ್ಕೃತರನ್ನಾಗಿಸಬೇಕು. ಶ್ರೀಮಠದ ಏಳ್ಗೆಗೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ' ಅವರು ತಿಳಿಸಿದರು.

ಮುಖ್ಯ ಅತಿಥಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, 'ಗುರು ಸಿದ್ಧಾರೂಢರ ಮಹಿಮೆಯ ಕುರಿತಾಗಿ ಸಾಂದರ್ಭಿಕವಾಗಿ ತಿಳಿಸಿ ಅಜ್ಜನವರ ತತ್ವ, ಉಪದೇಶಗಳನ್ನು ಎಲ್ಲರೂ ಪಾಲಿಸಬೇಕು' ಎಂದರು.

ಇಂಚಲ ಶಿವಯೋಗೀಶ್ವರಮಠದ ಪೀಠಾಧಿಪತಿ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ನೇಗಿನಹಾ ಅದ್ವೈತಾನಂದ ಭಾರತಿ ಸ್ವಾಮೀಜಿ, ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ, ವೀರಯ್ಯ ಸ್ವಾಮೀಜಿ ಹಿರೇಮಠ ಸಾನ್ನಿಧ್ಯವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಉದ್ಯೆಮಿ ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಎಫ್.ಎಸ್. ಸಿದ್ಧನಗೌಡರ, ರುದ್ರಗೌಡ ಗೌಡತಿ ಆಗಮಿಸಿದ್ದರು.ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಸುಮಂಗಲೆಯರ ಪೂರ್ಣಕುಂಭಮೇಳ ನಡೆಯಿತು. ಇದೇ ವೇಳೆ ದಾನಿಗಳನ್ನು ಗೌರವಿಸಲಾಯಿತು.

ಶ್ರೀ ಸಿದ್ಧಾರೂಢ ಮಠ ಸೇವಾ ಮತ್ತು ಅಭಿವೃದ್ಧಿ ಸಂಘದ ವತಿಯಿಂದ, ಗುರು ಹಿರಿಯರಿಂದ ಶ್ರೀಮಠಕ್ಕೆ ಆಗಮಿಸಿದ ಎಲ್ಲಾ ಪೂಜ್ಯರು ಹಾಗೂ ಗಣ್ಯಮಾನ್ಯರನ್ನು, ಶ್ರೀಮಠದ ಸೇವಾ ಕೈಂಕರ್ಯ ಕೈಗೊಂಡ ಭಕ್ತರನ್ನು ಸತ್ಕರಿಸಲಾಯಿತು.ಶ್ರೀನಗರ, ಪ್ರಭುನಗರ ಬಸವ ನಗರ, ಬೈಲಹೊಂಗಲ ಸುತ್ತಲಿನ ಗ್ರಾಮಗಳಿಂದ ಅಸಂಖ್ಯಾತ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸಿದ್ಧಾರೂಢರ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿ ಅಜ್ಜನ ಕೃಪೆಗೆ ಪಾತ್ರರಾದರು.

ವಕೀಲರ ಸಂಘದ ಉಪಾಧ್ಯಕ್ಷ ಎ.ಎಮ್. ಸಿದ್ರಾಮನಿ ಸ್ವಾಗತಿಸಿದರು. ಶಿಕ್ಷಕ ಸಿದ್ದು ನೇಸರಗಿ ನಿರೂಪಿಸಿದರು. ಶಿಕ್ಷಜ ಆರ್.ಎನ್. ತಿರಕನ್ನವರ, ಎಸ್.ಕೆ.ದಾಸನಕೊಪ್ಪ ವಂದಿಸಿದರು. ಹೋಮ, ರುದ್ರಾಭಿಷೇಕ ಮತ್ತು ಮಹಾ ಪ್ರಸಾದ ದೊಂದಿಗೆ ಜಾತ್ರೆ ಸಂಪನ್ನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.