ಭಾನುವಾರ, ಸೆಪ್ಟೆಂಬರ್ 15, 2019
26 °C

ಮೊಬೈಲ್ ಕಿತ್ತುಕೊಂಡಿದ್ದಕ್ಕೆ ತಂದೆಯನ್ನೇ ಕೊಂದ ಮಗ

Published:
Updated:

ಬೆಳಗಾವಿ: ಪುತ್ರನೇ ತಂದೆಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕಾಕತಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಶಂಕರ ದೇವಪ್ಪ ಕುಂಬಾರ (60) ಮೃತ. ರಘುವೀರ ಶಂಕರ ಕುಂಬಾರ (25) ಆರೋಪಿ.

ತಡರಾತ್ರಿಯಾದರೂ ಮೊಬೈಲ್ ನೋಡುತ್ತಿದ್ದ ಮಗನಿಗೆ ಶಂಕರ ಬುದ್ಧಿ ಹೇಳಿದ್ದರು. ಆದರೂ ಮಲಗದಿದ್ದಾಗ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ಸಿಟ್ಟಾದ ರಘುವೀರ ಇಳಿಗೆ ಮಣೆಯಿಂದ ಕೊಂದಿದ್ದಾನೆ. ತಲೆ, ಕಾಲನ್ನು ಕತ್ತರಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಶಂಕರ ಡಿಎಆರ್ ಪೊಲೀಸ್ ಆಗಿದ್ದರು. 3 ತಿಂಗಳ ಹಿಂದೆ ನಿವೃತ್ತರಾಗಿದ್ದರು. ರಘುವೀರ ಡಿಪ್ಲೊಮಾ ಫೇಲಾಗಿದ್ದರಿಂದ ಮನೆಯಲ್ಲೇ ಇರುತ್ತಿದ್ದ ಎಂದು ತಿಳಿದುಬಂದಿದೆ. ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಇನ್ ಸ್ಪೆಕ್ಟರ್ ಎಸ್.ಎಸ್. ಕೌಜಲಗಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧಿಸಲಾಗಿದೆ.

Post Comments (+)