ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗೆ ಬಜೆಟ್‌ನಲ್ಲಿ ₹500 ಕೋಟಿ ಕೇಳಿದ್ದೇವೆ: ಸಚಿವ ನಾಗೇಂದ್ರ

ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ: ಸಚಿವ ನಾಗೇಂದ್ರ
Published 12 ಫೆಬ್ರುವರಿ 2024, 23:41 IST
Last Updated 12 ಫೆಬ್ರುವರಿ 2024, 23:41 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿಯ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ₹500 ಕೋಟಿ ಅನುದಾನ ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತೇವೆ’ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.

‘ನೆರವಿಗೆ ಕಾಯುತ್ತಿದೆ ‘ಆಟ’ ಶೀರ್ಷಿಕೆಯಡಿ ಫೆ.11ರಂದು ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟಗೊಂಡ ವರದಿಗೆ ಪ್ರತಿಕ್ರಿಯಿಸಿದ ಅವರು, ‘ರಾಜಸ್ಥಾನ, ಪಂಜಾಬ್, ಒಡಿಶಾ, ಹರಿಯಾಣ ರಾಜ್ಯಗಳಲ್ಲಿ ಕ್ರೀಡೆಗೆ ಮೀಸಲಿಟ್ಟಿರುವ ಬಜೆಟ್ ಪ್ರಮಾಣ ಹೆಚ್ಚಿದೆ. ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೆಚ್ಚಿದ್ದಾರೆ. ಆದರೆ, ಅನುದಾನದ ಪ್ರಮಾಣ ಕಡಿಮೆ. ಕ್ರೀಡಾ ಹಾಸ್ಟೆಲ್‍ಗಳು ಮತ್ತು ಕ್ರೀಡಾಂಗಣಗಳಲ್ಲಿ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ. ಇವುಗಳನ್ನೆಲ್ಲ ಬಗೆಹರಿಸಿ, ಕ್ರೀಡಾಪಟುಗಳಿಗೆ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬೇಕಿದೆ’ ಎಂದರು.

‘ರಾಜ್ಯದಲ್ಲಿರುವ ಎಲ್ಲ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ₹600 ಕೋಟಿಯಿಂದ ₹800 ಕೋಟಿ ಅನುದಾನ ಅಗತ್ಯವಿದೆ. ಆಗ ಎಲ್ಲ ಕ್ರೀಡಾಂಗಣಗಳನ್ನು ಉನ್ನತೀಕರಿಸಿ, ಒಂದು ಹಂತಕ್ಕೆ ತರಬಹುದು. ಇದಕ್ಕಾಗಿ ಜಿಲ್ಲಾ ಹಂತದಲ್ಲಿರುವ ಸಿಎಸ್‍ಆರ್, ಡಿಎಂಎ ಅನುದಾನ ಬಳಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಆರಂಭದಲ್ಲಿ ಜಿಲ್ಲಾ ಕೇಂದ್ರದಲ್ಲಿನ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತೇವೆ. ನಂತರದಲ್ಲಿ ತಾಲ್ಲೂಕು ಮತ್ತು ಹೋಬಳಿ ಹಂತದ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು ತಿಳಿಸಿದರು.

‘ಪ್ರಜಾವಾಣಿ’ ವರದಿಯಲ್ಲಿನ ಅಂಶಗಳನ್ನು ಆಧರಿಸಿ, ಕ್ರೀಡಾಪಟುಗಳಿಗೆ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದೂ ಹೇಳಿದರು.

‘ಬೆಳಗಾವಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 10 ಎಕರೆ ಜಾಗ ಗುರುತಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT