ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸುರಕ್ಷತೆ ಪರಿಶೀಲಿಸಿದ ಆಯುಕ್ತ

Last Updated 4 ಮೇ 2022, 15:27 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿಂದ ತಾಲ್ಲೂಕಿನ ದೇಸೂರುವರೆಗೆ ಸಿದ್ಧವಾಗಿರುವ ಜೋಡಿ ರೈಲು ಮಾರ್ಗ(10.87 ಕಿ.ಮೀ.)ದಲ್ಲಿನ ಸುರಕ್ಷತೆಯನ್ನು ರೈಲ್ವೆ ಸುರಕ್ಷತಾ ಆಯುಕ್ತ ಅಭಯ್‌ಕುಮಾರ್‌ ರೈ ಬುಧವಾರ ಪರಿಶೀಲಿಸಿದರು.

ಅವರು ಹಾಗೂ ಅಧಿಕಾರಿಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸಿ ಪರಿಶೀಲನೆ ನಡೆಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು.

ಕೆಲವೇ ದಿನಗಳಲ್ಲಿ ಮುಂದಿನ ಹಂತದ ಕಾಮಗಾರಿ ಅಂದರೆ ಸುಲಧಾಳವರೆಗೆ (68 ಕಿ.ಮೀ.) ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ. ಲೋಂಡಾ–ಮೀರಜ್‌ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ ಕಾಮಗಾರಿ ಪ್ರಗತಿಯಲ್ಲಿದೆ. 2016ರಲ್ಲಿ ಮಂಜೂರಾದ ಈ ಯೋಜನೆಯು ₹ 1,190 ಕೋಟಿ ಮೊತ್ತದ್ದಾಗಿದೆ. ಬುಧವಾರ ಶಾಸನಬದ್ಧ ಪರಿಶೀಲನೆಗೆ ಒಳಪಪಟ್ಟ ಮಾರ್ಗವೂ ಸೇರಿದಂತೆ ಈವರೆಗೆ ಒಟ್ಟು 56 ಕಿ.ಮೀ. ಸಿದ್ಧಗೊಂಡಂತಾಗಿದೆ.

‘ಲೋಂಡಾ–ಮೀರಜ್‌ ಜೋಡಿ ಮಾರ್ಗ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯಮ ಮತ್ತು ಸಂಪರ್ಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮುಂಬೈ–ಚೆನ್ನೈ ಕೈಗಾರಿಕಾ ಕಾರಿಡಾರ್‌ಗೂ ಪೂರಕವಾಗಿರಲಿದೆ’ ಎಂದು ಅಭಯ್‌ಕುಮಾರ್‌ ಹೇಳಿದರು.

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಾಳಖೇಡ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ದೇಶ್ ರತನ್‌ ಗುಪ್ತ ಹಾಗೂ ವಿಭಾಗದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT