ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಟ್‌ ಹಚ್ರೋ’ ಅಭಿಯಾನಕ್ಕೆ ಸ್ಪಂದನೆ; ವಿದ್ಯುತ್‌ ದೀಪ ಅಳವಡಿಕೆ

Last Updated 23 ಜನವರಿ 2022, 11:36 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹಾರ ಕೊಡಬೇಕಾದ್ದದ್ದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದಲ್ಲಿ ಕೆ.ಆರ್.ಡಿ.ಸಿ.ಎಲ್.ವತಿಯಿಂದ ನಿರ್ಮಾಣವಾಗಿರುವ ಪ್ರಮುಖ ರಸ್ತೆಯಲ್ಲಿ ₹ 45 ಲಕ್ಷ ಅನುದಾನದಡಿಯಲ್ಲಿ ವಿದ್ಯುತ್ ದೀಪಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪುರಸಭೆಯಿಂದ ಕೋಟ್ಯಾಂತರ ರೂಪಾಯಿ ಅನುದಾನದಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಜನರಿಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಪುರಸಭೆ ಯೋಜನೆಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಮುಖ್ಯಾಧಿಕಾರಿ ಕೆ.ಐ.ನಾಗನೂರ ಮಾತನಾಡಿ, ‘ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂಬುದು ಜನರ ಬೇಡಿಕೆಯಾಗಿತ್ತು. ವಿದ್ಯುತ್ ಪರಿಕರ ತಡವಾಗಿದ್ದರಿಂದ ದೀಪಗಳ ಉದ್ಘಾಟನೆ ತಡವಾಯಿತು. ಈಗ ದೀಪಗಳ ಉದ್ಘಾಟನೆ ಆಗಿದೆ. ಜನರ ಬೇಡಿಕೆಯು ಈಡೇರಿದೆ. ಜನರ ಪ್ರತಿ ಸಮಸ್ಯೆಗೂ ಪುರಸಭೆ ಸ್ಪಂದಿಸುತ್ತದೆ’ ಎಂದರು.

‘ಲೈಟ್ ಹಚ್ರೋ’ ಅಭಿಯಾನ ಹೆಸರಿನಲ್ಲಿ ಕತ್ತಲೆಯಿಂದ ಕೂಡಿದ್ದ ಪಟ್ಟಣಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಬೈಲಹೊಂಗಲ ಶೌಟ್ಸ್ ಪೇಸಬುಕ್ ಗೆಳೆಯರು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದಿದ್ದರು.

ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಜುನ ಕಲಕುಟಕರ, ವಿರೋಧ ಪಕ್ಷ ನಾಯಕ ಶಿವಾನಂದ ಕೋಲಕಾರ, ಸದಸ್ಯರಾದ ರಾಜು ಜನ್ಮಟ್ಟಿ, ಉಳವಪ್ಪ ಬಡ್ಡಿಮನಿ, ಬುಡ್ಡೇಸಾಬ ಶಿರಸಂಗಿ, ಉಳವಪ್ಪ ಶಿಂತ್ರಿ, ಬಸವರಾಜ ಜಂಬಗಿ, ವಿಜಯ ಬೋಳನ್ನವರ, ಸದರುದೀನ ಅತ್ತಾರ, ಸುಭಾನಿ ಬಾಗವಾನ, ಪೇಸಬುಕ್ ಗೆಳೆಯರ ಬಳಗದ ಅಜಯ ಭಜಂತ್ರಿ, ಪುರಸಭೆ ಸಿಬ್ಬಂದಿ, ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT