ಗುರುವಾರ , ಏಪ್ರಿಲ್ 22, 2021
30 °C

ತಗ್ಗಿದ ನೀರು; ಸಂಚಾರಕ್ಕೆ ಮುಕ್ತವಾದ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ದಕ್ಷಿಣ ಮಹಾರಾಷ್ಟ್ರದಲ್ಲಿ ಸುರಿಯುತ್ತಿದ್ದ ಮಳೆ ಮಂಗಳವಾರ ಕ್ಷೀಣಿಸಿದೆ. ಇದರ ಪರಿಣಾಮವಾಗಿ ಕೃಷ್ಣಾ ಹಾಗೂ  ಉಪನದಿಗಳ ನೀರಿನ ಹರಿವು ಇಳಿಮುಖವಾಗಿದೆ. ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಭೋಜವಾಡಿ– ಕುನ್ನೂರ ಗ್ರಾಮಗಳ ನಡುವಿನ ವೇದಗಂಗಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಮೇಲೆ ಹರಿಯುತ್ತಿದ್ದ ನೀರು ತಗ್ಗಿದ್ದು, ಸಂಚಾರಕ್ಕೆ ಮುಕ್ತವಾಗಿದೆ.

ನಿಪ್ಪಾಣಿ ತಾಲ್ಲೂಕಿನ ಕಾರದಗಾ– ಭೋಜ ಗ್ರಾಮಗಳ ಮಧ್ಯೆ ಇರುವ ಸೇತುವೆ ಮೇಲೆ ವೇದಗಂಗಾ ಹಾಗೂ ಮಲಿಕವಾಡ– ದತ್ತವಾಡ ಗ್ರಾಮಗಳ ಮಧ್ಯೆದ ಸೇತುವೆ ಮೇಲೆ ದೂಧ್‌ಗಂಗಾ ನದಿ ನೀರು ಹರಿಯುತ್ತಿದ್ದು, ಇನ್ನೂ ಜಲಾವೃತ ಸ್ಥಿತಿಯಲ್ಲಿಯೇ ಇವೆ.

ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 25,000 ಕ್ಯುಸೆಕ್‌ ನೀರು ಹರಿದಿದೆ. ಜಿಲ್ಲೆಯಲ್ಲಿ ಮಂಗಳವಾರ ಮಳೆ ಸಂಪೂರ್ಣವಾಗಿ ಕ್ಷೀಣಿಸಿದೆ. ಬೆಳಗಾವಿಯಲ್ಲಿ ಬೆಳಿಗ್ಗೆ ಕೆಲಹೊತ್ತು ಜಿಟಿಜಿಟಿ ಮಳೆ ಸುರಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು