ಸೋಮವಾರ, ಆಗಸ್ಟ್ 2, 2021
23 °C

ಸುಳೇಭಾವಿ: ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಲಾಕ್‌ಡೌನ್‌ದಿಂದ ಸಂಕಷ್ಟಕ್ಕೀಡಾಗಿರುವ ತಾಲ್ಲೂಕಿನ ಸುಳೇಭಾವಿ ಗ್ರಾಮದ ಬಡ ಕುಟುಂಬದವರಿಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ದಿನಸಿ ಕಿಟ್‌ಗಳನ್ನು ಭಾನುವಾರ ವಿತರಿಸಿದರು.

ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ‘ಲಾಕ್‌ಡೌನ್‌ದಿಂದ ಬಹುತೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಅವರ ನೆರವಿಗೆ ನಿಲ್ಲುವುದು ನಮ್ಮ ಉದ್ದೇಶವಾಗಿದೆ. ಗೋಕಾಕ ನಗರ ಹಾಗೂ ತಾಲ್ಲೂಕಿನಲ್ಲೂ ಕಡುಬಡವರನ್ನು ಗುರುತಿಸಿ ಕೈಲಾದ ಸಹಾಯ ಮಾಡುತ್ತಿದ್ದೇವೆ. ಈವರೆಗೆ 300 ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. 500 ಕುಟುಂಬಗಳಿಗೆ ನೆರವಾಗಲು ನಿರ್ಧರಿಸಲಾಗಿದೆ’ ಎಂದರು.

ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ಅಧ್ಯಕ್ಷ ದೇವಣ್ಣ ಬಂಗೇನ್ನವರ, ಅಭಿಮಾನಿ ಬಳಗದ ಸದಸ್ಯರಾದ ಶಿವು ಹಿರೇಮಠ, ಮುತ್ತು ಜಮಖಂಡಿ, ಅಡಿವೇಶ ಮಜ್ಜಗಿ, ಮುಖಂಡರಾದ ಸಚಿನ ಮಂಡು, ಮಾರುತಿ ರಾವಳಗೌಡ್ರ, ಶಂಕರ ಜಾಲಿಕಟ್ಟಿ, ಅರ್ಜುನ ಪೂಜೇರಿ, ಸಿದ್ದು ಪೂಜೇರಿ, ಸದೆಪ್ಪ ಪೂಜೇರಿ, ಮಹಾಂತೇಶ ಕೋಟಿ ಇದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು