ಹುಕ್ಕೇರಿ: ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದು ಪುರಸಭೆಯ ಆದ್ಯ ಕರ್ತವ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.

ಪಟ್ಟಣದಲ್ಲಿನ ಜಲಸಂಗ್ರಹ ಮತ್ತು ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು. ಕಲುಷಿತ ನೀರು ಪೂರೈಕೆಯಾದ ಬಗ್ಗೆ ದೂರು ಬಂದಿದೆ. ಜನರು ಕೋವಿಡ್ನಿಂದ ತತ್ತರಿಸಿದ್ದಾರೆ, ಕಲುಷಿತ ನೀರು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಮುತುವರ್ಜಿ ವಹಿಸಿ ಕಾರ್ಯಗತ ಮಾಡಿದ್ದಾರೆ. ಪುರಸಭೆ ಸದಸ್ಯರು ಜನರ ಸೇವೆಗೆ ಬದ್ಧರಾಗಬೇಕು ಎಂದರು.

ಕೆಲವೊಂದು ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಅಥವಾ ತಾಂತ್ರಿಕ ತೊಂದರೆಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಆದರೆ ಅದನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಜತೆ ತಕ್ಷಣ ಚರ್ಚಿಸಿ ಸಮಸ್ಯೆ ಪರಿಹರಿಸಬೇಕು ಎಂದರು. ಪುರಸಭೆ ಜೆಇ ಗೌರಿಶಂಕರ ಮಹಾಳಂಕ ಮತ್ತು ಮುಖ್ಯಾಧಿಕಾರಿ ಮೋಹನ್ ಜಾಧವ್ ಪಟ್ಟಣಕ್ಕೆ ಬರುವ ನೀರಿನ ಪ್ರಮಾಣ ಮತ್ತು ವಿತರಣೆ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಅಣ್ಣಾಗೌಡ ಪಾಟೀಲ, ವರ್ತಕ ಚನ್ನಪ್ಪ ಗಜಬರ, ಸುಭಾಸ ನಾಯಿಕ, ಪುಟ್ಟು ಖಾಡೆ, ಗಿರೀಶ್ ಪಾಟೀಲ, ಮೈನುದ್ಧೀನ ಮೊಮೀನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.