ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಕಜ್‌ ಜಮಾತ್‌ನಲ್ಲಿ ಭಾಗಿ: ಮಾಹಿತಿ ಮುಚ್ಚಿಟ್ಟಿದ್ದ 7 ಜನರ ಮೇಲೆ ಕೇಸ್‌ ದಾಖಲು

Last Updated 11 ಏಪ್ರಿಲ್ 2020, 15:19 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ತಿಂಗಳು ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆದಿದ್ದ ಮರ್ಕಜ್‌ ಜಮಾತ್‌ನಲ್ಲಿ ಭಾಗವಹಿಸಿದ್ದರ ಬಗ್ಗೆ ಮಾಹಿತಿ ಬಚ್ಚಿಟ್ಟಿದ ಯುವಕ ಹಾಗೂ ಆತನಿಗೆ ಸಹಕರಿಸಿದ 6 ಜನರ ಮೇಲೆ ಹಿರೇಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾನು ಮರ್ಕಜ್‌ ಜಮಾತ್‌ನಲ್ಲಿ ಭಾಗವಹಿಸಿರುವುದನ್ನು ಯುವಕನು ಟಾಸ್ಕ್‌ ಫೋರ್ಸ್‌ನವರಿಗೆ ತಿಳಿಸಿರಲಿಲ್ಲ. ಇವನೊಂದಿಗೆ ಅದೇ ಗ್ರಾಮದ ತಬ್ಲೀಗ್‌ ಜಮಾತ್‌ನ ಕಾರ್ಯದರ್ಶಿ, ಮುಖಂಡ ಹಾಗೂ ಆತನ ಮನೆಯವರೂ ಸಹ ಆತನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದರು. ಜಮಾತ್‌ನಲ್ಲಿ ಭಾಗವಹಿಸಿದ್ದವರ ಬಗ್ಗೆ ಮಾಹಿತಿ ನೀಡಿ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ, ಇವರು ಮಾಹಿತಿ ನೀಡಿರಲಿಲ್ಲ.

ಸರ್ಕಾರದ ಆದೇಶ ಧಿಕ್ಕರಿಸಿದ ಹಿನ್ನೆಲೆಯಲ್ಲಿ ಕೋವಿಡ್ - 19 ಟಾಸ್ಕ್ ಫೋರ್ಸಿನ ನೋಡಲ್ ಅಧಿಕಾರಿ ರಾಜೇಂದ್ರ ಪವಾಡೆಪ್ಪ ಖಾನಾಪುರೆ ನೀಡಿದ ದೂರಿನ ಮೇರೆಗೆ ಏಳೂ ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT