ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ಪರಿಣಾಮಕಾರಿ ಅನುಷ್ಠಾನವು ಬೋಧಕರನ್ನು ಅವಲಂಬಿಸಿದೆ’ ಎಂದು ಚೆನ್ನೈನ ರಾಮಕೃಷ್ಣ ಮಠದ ಮಹಾಮೇಧಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಕೆಎಲ್ಎಸ್ ಜಿಐಟಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಎನ್ಇಪಿಯಲ್ಲಿ ಶಿಕ್ಷಕರ ಪಾತ್ರ’ ವಿಷಯ ಕುರಿತು ಅವರು ಮಾತನಾಡಿದರು.

‘ಪ್ರತಿ ಯೋಚನೆ ಹಾಗೂ ಕ್ರಿಯೆಯು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿ ಕ್ಷಣವೂ ನಾವು ಇತಿಹಾಸ ಸೃಷ್ಟಿಸುತ್ತಿರುತ್ತೇವೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜ್ಞಾನವಷ್ಟೇ ಮುಖ್ಯವಲ್ಲ. ಒಳ್ಳೆಯ ಉದ್ಯೋಗ ಹಾಗೂ ವೇತನದ ಪ್ಯಾಕೇಜ್ ಪಡೆಯುವುದು ಯಶಸ್ಸಿನ ಸೂತ್ರವಲ್ಲ. ಉತ್ತಮ ನಾಗರಿಕರಾಗಲು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಹುಶಿಸ್ತೀಯ ಜ್ಞಾನ ಒದಗಿಸುವಲ್ಲಿ ಎನ್ಇಪಿ ಸಹಕಾರಿಯಾಗಿದೆ. ಇದನ್ನು ತಿಳಿಸಿಕೊಡುವಲ್ಲಿ ಬೋಧಕರ ಪಾತ್ರ ಪ್ರಮುಖವಾಗಿದೆ’ ಎಂದು ತಿಳಿಸಿದರು.

‘ಶಿಕ್ಷಕರು ಬೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳುವುದು ಮಹತ್ವದ್ದಾಗುತ್ತದೆ. ಇದೊಂದು ವೃತ್ತಿ ಎಂದು ಭಾವಿಸದೆ ಸೇವೆ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ದೇಶವನ್ನು ಉತ್ತಮವಾಗಿ ನಿರ್ಮಿಸಬಹುದು’ ಎಂದರು.

ಆಡಳಿತ ಮಂಡಳಿ ಸದಸ್ಯರು, ಬೋಧಕ– ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ಸ್ವಾಗತಿಸಿದರು. ಪ್ರೊ.ಪೂರ್ವಾ ಅಧ್ಯಾಪಕ ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.