ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದಲ್ಲೂ ಕಾಂಗ್ರೆಸ್‌ ಗ್ಯಾರಂಟಿ ಜಾರಿ

ಅಲ್ಪಸಂಖ್ಯಾತರ ಸಭೆಯಲ್ಲಿ ವಸತಿ ಮತ್ತು ವಕ್ಪ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ ಹೇಳಿಕೆ
Published 27 ಏಪ್ರಿಲ್ 2024, 15:17 IST
Last Updated 27 ಏಪ್ರಿಲ್ 2024, 15:17 IST
ಅಕ್ಷರ ಗಾತ್ರ

ಗೋಕಾಕ: ‘ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಗ್ಯಾರಂಟಿ ಜಾರಿ ಮಾಡಿರುವ ಹಾಗೆ ಕೇಂದ್ರದಲ್ಲಿಯೂ ಜಾರಿ ಮಾಡುವ ಯೋಜನೆ ಹಮ್ಮಿಕೊಂಡು ಪ್ರಣಾಳಿಕೆ ಹೊರಡಿಸಿದೆ. ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಅನುಷ್ಠಾನ ಗೊಳಿಸಲಾಗುವುದು. ವೈಯಕ್ತಿಕ ಸಂಬಂಧಗಳನ್ನು ಬದಿಗೊತ್ತಿ ಮುಸ್ಲಿಂ ಬಾಂಧವರು ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು’ ಎಂದು ವಸತಿ ಮತ್ತು ವಕ್ಪ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ ಹೇಳಿದರು.

ಶನಿವಾರ ನಗರದ ಕೆಜಿಎನ್ ಸಭಾಂಗಣದಲ್ಲಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷದ ಚುನಾವಣೆ ಬಂದಾಗ ಅಷ್ಟೇ ಅಲ್ಲ; ನಿರಂತರ ಜನರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಜನರಿಗೆ ಮೂಲ ಸೌಲಭ್ಯಗಳನ್ನು ನೀಡುವ ಕಾರ್ಯಮಾಡುತ್ತ ಬಂದಿದೆ. ಬಿಜೆಪಿಗೆ ಹಿಂದೂ–ಮುಸ್ಲಿಂ ವಿಚಾರ ಬಿಟ್ಟು ಬೇರೆ ಯಾವ ವಿಚಾರಗಳು ಇಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ತಾವು ಮಾಡುವ ಕಾರ್ಯಗಳನ್ನು ಹೇಳಿ ಮತ ಕೇಳುತ್ತಾ ಬಂದಿದೆ ಮತ್ತು ಸರ್ಕಾರ ಬಂದ ನಂತರ ಅದನ್ನು ಅನುಷ್ಠಾನ ಗೊಳಿಸಿದೆ. ಜಾತಿಯತೆ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ. ಎಲ್ಲರೂ ಒಂದಾಗಿ ಬಾಳುವುದನ್ನು ಹೇಳಿಕೊಟ್ಟಿದೆ. ಸ್ವಾತಂತ್ರ್ಯ ತರುವಲ್ಲಿ ಮುಸ್ಲಿಂ ನಾಯಕರ ಪಾತ್ರ ಹೆಚ್ಚಾಗಿದ್ದು, ಮುಸಲ್ಮಾನರು ಈ ದೇಶ ಅವಿಭಾಜ್ಯ ಅಂಗ ಎಂದ ಅವರು ಮುಸ್ಲಿಮರು ಕರ್ನಾಟಕ ಅಷ್ಟೇ ಅಲ್ಲ ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ’ ಎಂದು ಹೇಳಿದರು.

‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಬಡವರನ್ನು ಉದ್ದಾರ ಮಾಡುವ ಮನಸ್ಸು ಇಲ್ಲಾ ಆದರೆ ಕಾಂಗ್ರೆಸ್ ಪಕ್ಷ ಯಾವಗ ಅಧಿಕಾರಕ್ಕೆ ಬಂದಿದೆ ಬಡವರ ಪರವಾಗಿ ಹಲವಾರು ಕಾರ್ಯಗಳನ್ನು ಮಾಡಿ ಬಡವರ ಬೆನ್ನೆಲುಬಾಗಿ ನಿಂತಿದೆ’ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಡಾ. ಮಹಾಂತೇಶ ಕಡಾಡಿ, ಜಾಕೀರ ನದಾಫ, ನಗರ ಅಭಿವೃದ್ಧಿ ಪ್ರಾಧಿಕಾರ ಚೇರಮನ್ ಸಿದ್ದಲಿಂಗ ದಳವಾಯಿ, ಚಂದ್ರಶೇಖರ್ ಕೊಣ್ಣೂರ, ನಜೀರ ಶೇಖ್, ಹಾಜಿ ಕುತಬುದ್ದೀನ ಬಸ್ಸಾಪೂರಿ, ಮೌಲಾನ ಬಶೀರ ಉಲ್ ಹಕ್ ಕಾಶಮಿ, ಇಲಾಯಿ ಖೈರದಿ, ಜಾಕೀರ ಕುಡಚಿಕರ, ದಸ್ತಗಿರಿ ಪೈಲವಾನ, ಕೆಪಿಸಿಸಿ ಸದಸ್ಯ ಜಬ್ಬಾರಖಾನ, ಜನಾಬ ಹಾಜಿ ಶರಪೋದ್ದೀನ ನರೋ ಮಂಜುನಾಥ್ ಬಂಡಾರಿ, ಜಗ್ಗಣ್ಣಾ ಬಿ.ಕೆ, ಮನ್ನಸೂರ ಖಾನ, ಲಕ್ಕಣ ಸಂವಸುದ್ದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT